IPL 2024: ಆರ್​ಸಿಬಿಗೆ ಮೊದಲ ಪಂದ್ಯ, ಎದುರಾಳಿ ಯಾರು? ಇಲ್ಲಿದೆ ವೇಳಾಪಟ್ಟಿ!

rcb
Published on

ಬೆಂಗಳೂರು: ಐಪಿಎಲ್​ ಅಭಿಮಾನಿಗಳಿಗೆ ಇನ್ನೂ ಐಪಿಎಲ್​ ಹುಚ್ಚು ಜೋರಾಗಲಿದೆ. ಐಪಿಎಲ್ 2024 ರ ಮೊದಲಾರ್ಧದ ವೇಳಾಪಟ್ಟಿ ಗುರುವಾರ ಸಂಜೆ ಪ್ರಕಟವಾಗಿದ್ದು, ಏಪ್ರಿಲ್​ 7ರವರೆಗೆ ಮೊದಲ 21 ಪಂದ್ಯಗಳು ನಡೆಯಲಿವೆ. ಈ 21 ಪಂದ್ಯಗಳ ಪೈಕಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ 5 ಪಂದ್ಯಗಳನ್ನು ಆಡಲಿದೆ.

ಮಾರ್ಚ್ 22ರಂದು ಚೆನ್ನೈಯಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ತಮಿಳುನಾಡಿನ ಎಂ ಚಿದಂಬರಂ ಸ್ಟೇಡಿಯಂನಲ್ಲಿ ಎದುರಿಸಲಿದೆ.

ತನ್ನ ಎರಡನೇ ಪಂದ್ಯವನ್ನು ಮಾರ್ಚ್​ 25 ರಂದು ಆಡಲಿರುವ ಆರ್​ಸಿಬಿ, ಈ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಬೆಂಗಳೂರಿನಲ್ಲಿ ಎದುರಿಸಲಿದೆ. ಈ ಪಂದ್ಯ ಕೂಡ ಸಂಜೆ 7.30 ಕ್ಕೆ ಆರಂಭವಾಗಲಿದೆ.

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮೊದಲ ಹಂತದ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ. ಈ ಅವಧಿಯಲ್ಲಿ 10 ನಗರಗಳಲ್ಲಾಗಿ ಒಟ್ಟು 21 ಪಂದ್ಯಗಳು ನಡೆಯಲಿದೆ. ಸಾರ್ವತ್ರಿಕ ಚುನಾವಣೆಯ ದಿನಾಂಕವನ್ನು ಚುನಾವಣಾ ಆಯೋಗ ಪ್ರಕಟಿಸಿದ ಬಳಿಕ ಉಳಿದ ಪಂದ್ಯಗಳ ವೇಳಾಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಬಿಸಿಸಿಐ ಪ್ರಕಟಣೆ ತಿಳಿಸಿದೆ.

ಆರ್​ಸಿಬಿ ತಂಡದ ವೇಳಾಪಟ್ಟಿ ಹೀಗಿದೆ!

ಮಾರ್ಚ್ 22: ಆರ್‌ಸಿಬಿ vs ಚೆನ್ನೈ (ಸ್ಥಳ: ಚೆನ್ನೈ)

ಮಾರ್ಚ್ 25: ಆರ್‌ಸಿಬಿ vs ಪಂಜಾಬ್ (ಸ್ಥಳ: ಬೆಂಗಳೂರು)

ಮಾರ್ಚ್ 29: ಆರ್‌ಸಿಬಿ vs ಕೋಲ್ಕತ್ತ (ಸ್ಥಳ: ಬೆಂಗಳೂರು)

ಏಪ್ರಿಲ್ 02: ಆರ್‌ಸಿಬಿ vs ಲಖನೌ (ಸ್ಥಳ: ಬೆಂಗಳೂರು)

ಏಪ್ರಿಲ್ 06: ಆರ್‌ಸಿಬಿ vs ರಾಜಸ್ಥಾನ (ಸ್ಥಳ: ಜೈಪುರ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net