IPL 2024: ಟಾಸ್ ಗೆದ್ದ ಡೆಲ್ಲಿ ಬೌಲಿಂಗ್ ಆಯ್ಕೆ! ಆರ್​ಸಿಬಿ ಗೆದ್ದರಷ್ಟೇ ಪ್ಲೇ-ಆಫ್​ಗೇರುವ ಕನಸು ಜೀವಂತ

rcb
Published on

ಬೆಂಗಳೂರು: ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ 2024ರ 62ನೇ ಪಂದ್ಯ ರಾಯಲ್ ಚಾಲೆಂಜರ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಲಿವೆ.

ಇನ್ನು ಈ ಪಂದ್ಯದ ಟಾಸ್ ಕೂಡ ಮುಗಿದಿದ್ದು ಟಾಸ್ ಗೆದ್ದ ಡೆಲ್ಲಿ ತಂಡದ ನಾಯಕ ಅಕ್ಷರ್ ಪಟೇಲ್​ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯ ಉಭಯ ತಂಡಗಳ ಪಾಲಿಗೂ ಮಾಡು ಇಲ್ಲವೆ ಮಡಿ ಎನಿಸಿದ್ದು, ಸೋತ ತಂಡ ಪ್ಲೇಆಫ್​ ರೇಸ್​ನಿಂದ ಹೊರಬೀಳಲಿದೆ. ಆರ್​ಸಿಬಿ ತವರಿನ ಲಾಭ ಹೊಂದಿದ್ದರೆ, ಡೆಲ್ಲಿ ತಂಡ ನಾಯಕ ರಿಷಭ್​ ಪಂತ್​ ಗೈರಿನ ಬಲುದೊಡ್ಡ ಹಿನ್ನಡೆ ಎದುರಿಸಿದೆ.

ಆರಂಭಿಕ 8 ಪಂದ್ಯಗಳಲ್ಲಿ 7ರಲ್ಲಿ ಸೋತು ಬಹುತೇಕ ನಿರ್ಗಮನ ಬಾಗಿಲಿನತ್ತ ಸಾಗಿದ್ದ ಫಾಫ್​ ಡು ಪ್ಲೆಸಿಸ್​ ಪಡೆ, ನಂತರದಲ್ಲಿ ಆಡಿದ 4 ಪಂದ್ಯಗಳಲ್ಲೂ ಗೆಲುವು ಸಾಧಿಸಿದೆ. ಇದರೊಂದಿಗೆ ಆರ್​ಸಿಬಿ ಮತ್ತೆ ಪ್ಲೇಆಫ್​​ ಕನಸು ಕಾಣಲಾರಂಭಿಸಿದೆ. ಕಳೆದ 4 ಪಂದ್ಯಗಳಲ್ಲಿ ಗುಜರಾತ್​ ವಿರುದ್ಧ 2 ಬಾರಿ ಗೆದ್ದಿರುವ ಆರ್​ಸಿಬಿ, ಪಂಜಾಬ್​ ಕಿಂಗ್ಸ್​ ಮತ್ತು ಸನ್​ರೈಸರ್ಸ್​ ತಂಡಗಳನ್ನೂ ಮಣಿಸಿದೆ. ಈ 4 ಗೆಲುವು ಸಾಧಿಸಿದ ರೀತಿ ಮತ್ತು ಡೆಲ್ಲಿ ತಂಡ ಪಂತ್​ ಗೈರಿನ ಹಿನ್ನಡೆ ಹೊಂದಿರುವುದನ್ನು ಗಮನಿಸಿದಾಗ ಆರ್​ಸಿಬಿ ಈ ಪಂದ್ಯದಲ್ಲಿ ಫೇವರಿಟ್​ ತಂಡವೆನಿಸಿದೆ.

ಡೆಲ್ಲಿ ತಂಡವೂ ಆರಂಭಿಕ 5 ಪಂದ್ಯಗಳಲ್ಲಿ 1ರಲ್ಲಿ ಮಾತ್ರ ಗೆದ್ದಿತ್ತು. ನಂತರದಲ್ಲಿ ಆಡಿದ 7 ಪಂದ್ಯಗಳಲ್ಲಿ 5ರಲ್ಲಿ ಗೆದ್ದು ಪ್ಲೇಆಫ್​​ ಅವಕಾಶ ವೃದ್ಧಿಸಿಕೊಂಡಿದೆ. ಅಂಕಪಟ್ಟಿಯಲ್ಲಿ ಸದ್ಯ 5ನೇ ಸ್ಥಾನದಲ್ಲಿರುವ ಡೆಲ್ಲಿ ಈ ಪಂದ್ಯ ಗೆದ್ದರೆ 4ನೇ ಸ್ಥಾನಕ್ಕೇರಲಿದೆ. ಆದರೆ ರನ್​ರೇಟ್​ ಮೈನಸ್​ನಲ್ಲಿರುವುದರಿಂದ ಡೆಲ್ಲಿಗೆ ದೊಡ್ಡ ಅಂತರದ ಗೆಲುವು ಅಗತ್ಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net