ರಾಜಸ್ಥಾನ ರಾಯಲ್ಸ್​ ವಿರುದ್ಧ ಗೆಲುವಿನ ನಗೆ ಬೀರಿದ ಡೆಲ್ಲಿ ಕ್ಯಾಪಿಟಲ್ಸ್​

Delhi
Published on

ದುಬೈ: ಅನುಭವಿ ಬ್ಯಾಟ್ಸ್‌ಮನ್ ಶಿಖರ್ ಧವನ್ (57ರನ್, 33 ಎಸೆತ, 6 ಬೌಂಡರಿ, 2 ಸಿಕ್ಸರ್) ಹಾಗೂ ನಾಯಕ ಶ್ರೇಯಸ್ ಅಯ್ಯರ್ (53 ರನ್, 43 ಎಸೆತ, 3 ಬೌಂಡರಿ, 2 ಸಿಕ್ಸರ್) ಜೋಡಿಯ ಸಮಯೋಚಿತ ಬ್ಯಾಟಿಂಗ್ ಹಾಗೂ ಸ್ಲಾಗ್ ಓವರ್‌ಗಳಲ್ಲಿ ಬೌಲರ್‌ಗಳ ಮಾರಕ ದಾಳಿ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಐಪಿಎಲ್-13ರ ತನ್ನ 8ನೇ ಪಂದ್ಯದಲ್ಲಿ ಜಯದ ನಗೆ ಬೀರಿತು.

ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಪಡೆ 13 ರನ್‌ಗಳಿಂದ ರಾಜಸ್ಥಾನ ರಾಯಲ್ಸ್ ತಂಡವನ್ನು ಮಣಿಸಿತು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ತಂಡ 7 ವಿಕೆಟ್‌ಗೆ 161 ರನ್ ಕಲೆಹಾಕಿತು. ಪ್ರತಿಯಾಗಿ ರಾಜಸ್ಥಾನ ತಂಡ 8 ವಿಕೆಟ್‌ಗೆ 148 ರನ್ ಪೇರಿಸಲಷ್ಟೇ ಶಕ್ತವಾಯಿತು.

ಡೆಲ್ಲಿ ಕ್ಯಾಪಿಟಲ್ಸ್​: 7 ವಿಕೆಟ್​ಗೆ 161 ರನ್​ (ಶಿಖರ್​ ಧವನ್​ 57, ಶ್ರೇಯಸ್​ ಅಯ್ಯರ್​ 53, ತುಷಾರ್​ ದೇಶ್​ಪಾಂಡೆ 37ಕ್ಕೆ 2, ಎನ್ರಿಚ್​ ನಾಟ್ಜೆ 33ಕ್ಕೆ 2)

ರಾಜಸ್ಥಾನ ರಾಯಲ್ಸ್​: 8 ವಿಕೆಟ್​ಗೆ 148 ರನ್​ (ಬೆನ್​ ಸ್ಟೋಕ್ಸ್​ 41, ರಾಬಿನ್​ ಉತ್ತಪ್ಪ 32, ಸಂಜು ಸ್ಯಾಮ್ಸನ್​ 25 ಮತ್ತು ಜಾಸ್​ ಬಟ್ಲರ್​ 22, ಜೋಫ್ರಾ ಆರ್ಚರ್​ 19ಕ್ಕೆ 3, ಉನದ್ಕತ್​ 32ಕ್ಕೆ 2 )

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net