

ಮುಂಬೈ: ಆರಂಭಿಕ ಆಘಾತದ ನಡುವೆಯೂ ನಾಯಕ ಫಾಫ್ ಡು ಪ್ಲೆಸಿಸ್ (96 ರನ್, 64 ಎಸೆತ, 11 ಬೌಂಡರಿ, 2 ಸಿಕ್ಸರ್) ಕಟ್ಟಿದ ಜವಾಬ್ದಾರಿಯುತ ಇನಿಂಗ್ಸ್ ಹಾಗೂ ವೇಗಿ ಜೋಸ್ ಹ್ಯಾಸಲ್‌ವುಡ್ (25ಕ್ಕೆ4) ಮಾರಕ ದಾಳಿ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್-15ರ ಪಂದ್ಯದಲ್ಲಿ ಕನ್ನಡಿಗ ಕೆಎಲ್ ರಾಹುಲ್ ಸಾರಥ್ಯದ ಲಖನೌ ಸೂಪರ್‌ಜೈಂಟ್ಸ್ ತಂಡವನ್ನು 18 ರನ್‌ಗಳಿಂದ ಮಣಿಸಿತು. ಇದರಿಂದ ಲೀಗ್‌ನಲ್ಲಿ ಸತತ 2ನೇ ಗೆಲುವು ದಾಖಲಿಸಿದ ಪ್ಲೆಸಿಸ್ ಪಡೆ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿತು.
ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಐಪಿಎಲ್-15ರ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ 6 ವಿಕೆಟ್‌ಗೆ 181 ರನ್ ಪೇರಿಸಿತು. ಪ್ರತಿಯಾಗಿ ಕೆಎಲ್ ರಾಹುಲ್ (30ರನ್, 24 ಎಸೆತ, 3 ಬೌಂಡರಿ, 1 ಸಿಕ್ಸರ್) ಬಿರುಸಿನ ಆರಂಭದ ನಡುವೆಯೂ ಜೋಸ್ ಹ್ಯಾಸಲ್‌ವುಡ್ ದಾಳಿಗೆ ನಲುಗಿದ ಎಲ್‌ಎಸ್‌ಜಿ 8 ವಿಕೆಟ್‌ಗೆ 163 ರನ್ ಪೇರಿಸಲಷ್ಟೇ ಶಕ್ತವಾಯಿತು.
ಆರ್‌ಸಿಬಿ: 6 ವಿಕೆಟ್‌ಗೆ 181 (ಪ್ಲೆಸಿಸ್ 96, ಗ್ಲೆನ್ ಮ್ಯಾಕ್ಸ್‌ವೆ 23, ಶಾಬಾಜ್ ಅಹಮದ್ 26, ದುಶ್ಮಂತ ಚಮೀರಾ 31ಕ್ಕೆ 2, ಜೇಸನ್ ಹೋಲ್ಡರ್ 25ಕ್ಕೆ 2, ಕೃನಾಲ್ ಪಾಂಡ್ಯ 29ಕ್ಕೆ 1), ಲಖನೌ ಸೂಪರ್‌ಜೈಂಟ್ಸ್: 6 ವಿಕೆಟ್‌ಗೆ 163 (ಕೆಎಲ್ ರಾಹುಲ್ 30, ಕೃನಾಲ್ ಪಾಂಡ್ಯ 42, ಮಾರ್ಕಸ್ ಸ್ಟೋಯಿನಿಸ್ 24, ಜೋಶ್ ಹ್ಯಾಸಲ್‌ವುಡ್ 25ಕ್ಕೆ 4, ಹರ್ಷಲ್ ಪಟೇಲ್ 47ಕ್ಕೆ 2)