ಇಂದು ಗುಜರಾತ್ ಟೈಟಾನ್ಸ್-ಪಂಜಾಬ್ ಕಿಂಗ್ಸ್ ಹಣಾಹಣಿ ; ಮಾಡು ಇಲ್ಲವೇ ಮಡಿ ಸ್ಥಿತಿಯಲ್ಲಿ ಮಯಾಂಕ್ ಪಡೆ

ipl-15 punjab and gujrat match preview for web
Published on

ಮುಂಬೈ: ಪ್ಲೇಆಫ್ ಹಂತಕ್ಕೇರಲು ಮಾಡು ಇಲ್ಲವೆ ಮಡಿ ಸ್ಥಿತಿಯಲ್ಲಿರುವ ಕನ್ನಡಿಗ ಮಯಾಂಕ್ ಅಗರ್ವಾಲ್ ಸಾರಥ್ಯದ ಪಂಜಾಬ್ ಕಿಂಗ್ಸ್ ಮತ್ತು ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಭದ್ರಪಡಿಸಿಕೊಂಡು ಪ್ಲೇಆಫ್ ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಂಡಿರುವ ಗುಜರಾತ್ ಟೈಟಾನ್ಸ್ ತಂಡಗಳು ಐಪಿಎಲ್-15ರಲ್ಲಿ ಮಂಗಳವಾರ ಮುಖಾಮುಖಿ ಆಗಲಿವೆ. ಈಗಾಗಲೆ ಐದು ಸೋಲುಗಳಿಂದ ಕಂಗೆಟ್ಟಿರುವ ಪಂಜಾಬ್ ತಂಡದ ಪಾಲಿಗೆ ಉಳಿದ 5 ಪಂದ್ಯಗಳು ಮಹತ್ವ ಪಡೆದಿವೆ. ಕನಿಷ್ಠ ಒಂದು ಪಂದ್ಯದಲ್ಲಿ ಸೋತರೂ ಮುಂದಿನ ಹಾದಿ ಮತ್ತಷ್ಟು ಕಠಿಣಗೊಳ್ಳಲಿದೆ. ಮತ್ತೊಂದೆಡೆ, 16 ಅಂಕಗಳೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿರುವ ಹಾರ್ದಿಕ್ ಪಾಂಡ್ಯ ಸಾರಥ್ಯದ ಗುಜರಾತ್ ಜಯ ದಾಖಲಿಸಿದರೆ ಪ್ಲೇಆಫ್ ಸ್ಥಾನ ಖಚಿತಗೊಳ್ಳಲಿದೆ. ಅಗ್ರಸ್ಥಾನ ಕಾಯ್ದುಕೊಳ್ಳುವ ದೃಷ್ಟಿಯಿಂದ ಗುಜರಾತ್‌ಗೆ ಹಾಗೂ ಪ್ಲೇಆಫ್ ಹೋರಾಟವನ್ನು ಜೀವಂತವಾಗಿರಿಸಿಕೊಳ್ಳುವ ಸಲುವಾಗಿ ಪಂಜಾಬ್ ಪಾಲಿಗೆ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆಯಲಿರುವ ಕದನ ಮಹತ್ವ ಪಡೆದಿದೆ. ಮೊದಲ ಹಣಾಹಣಿಯಲ್ಲಿ ಗುಜರಾತ್ ಎದುರು ಸೋತಿರುವ ಮಯಾಂಕ್ ಪಡೆ ತಿರುಗೇಟು ನೀಡುವ ತವಕದಲ್ಲಿದೆ.

ಟೀಮ್ ನ್ಯೂಸ್:

ಪಂಜಾಬ್ ಕಿಂಗ್ಸ್: ಸಿಕ್ಕ ಅವಕಾಶಗಳನ್ನು ಕೈಚೆಲ್ಲುತ್ತಿರುವ ಜಾನಿ ಬೇರ್‌ಸ್ಟೋ ಬದಲಿಗೆ ಒಡೆನ್ ಸ್ಮಿತ್ ವಾಪಸಾಗುವ ನಿರೀಕ್ಷೆಯಿದ್ದು, ರಿಷಿ ಧವನ್ ಅಥವಾ ಹರ್‌ಪ್ರೀತ್ ಬ್ರಾರ್ ಇಬ್ಬರಲ್ಲಿ ಒಬ್ಬರು ಕಣಕ್ಕಿಳಿಯಲಿದ್ದಾರೆ.

ಗುಜರಾತ್ ಟೈಟಾನ್ಸ್: ಗೆಲುವಿನ ಲಯದಲ್ಲಿರುವ ಟೈಟಾನ್ಸ್ ತಂಡದಲ್ಲಿ ಬದಲಾವಣೆ ನಿರೀಕ್ಷಿಸುವಂತಿಲ್ಲ.

ಪಂದ್ಯ ಆರಂಭ: ರಾತ್ರಿ 7.30ಕ್ಕೆ

ನೇರಪ್ರಸಾರ : ಸ್ಟಾರ್ ಸ್ಪೋರ್ಟ್ಸ್

ಮೊದಲ ಮುಖಾಮುಖಿ: ಗುಜರಾತ್‌ಗೆ 6 ವಿಕೆಟ್ ಜಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net