ಸಿಎಸ್‌ಕೆ ತಂಡದ ಪ್ಲೇಆಫ್ ಕನಸು ಬಹುತೇಕ ಭಗ್ನ ; ಪಂಜಾಬ್ ಎದುರು 11 ರನ್‌ಗಳಿಂದ ಸೋಲು

ipl-15 punjab and csk match for web
Published on

ಮುಂಬೈ: ಅನುಭವಿ ಎಡಗೈ ಆರಂಭಿಕ ಶಿಖರ್ ಧವನ್ (88*ರನ್, 59 ಎಸೆತ, 9 ಬೌಂಡರಿ, 2 ಸಿಕ್ಸರ್) ಏಕಾಂಗಿ ಬ್ಯಾಟಿಂಗ್ ನಿರ್ವಹಣೆ ಹಾಗೂ ಬೌಲರ್‌ಗಳ ಸಂಘಟಿತ ಹೋರಾಟದ ಲವಾಗಿ ಪಂಜಾಬ್ ಕಿಂಗ್ಸ್ ತಂಡ ರೋಚಕ ಗೆಲುವಿನ ನಗೆ ಬೀರಿತು. ವಾಂಖೆಡೆ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಐಪಿಎಲ್-15ರ ಹಣಾಹಣಿಯಲ್ಲಿ ಕನ್ನಡಿಗ ಮಯಾಂಕ್ ಅಗರ್ವಾಲ್ ಸಾರಥ್ಯದ ಪಂಜಾಬ್ ತಂಡ ಹಾಲಿ ಚಾಂಪಿಯನ್ ಚೆನ್ನೈ ಸೂಪರ್‌ಕಿಂಗ್ಸ್ ತಂಡವನ್ನು 11 ರನ್‌ಗಳಿಂದ ಸೋಲಿಸಿತು. ಇದರಿಂದ 5ನೇ ಗೆಲುವು ಕಂಡ ಪಂಜಾಬ್ ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೇರಿದರೆ, 6ನೇ ಸೋಲು ಕಂಡ ರವೀಂದ್ರ ಜಡೇಜಾ ಬಳಗದ ಪ್ಲೇಆಫ್ ಆಸೆ ಬಹುತೇಕ ಭಗ್ನಗೊಂಡಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್, ಧವನ್ ಹಾಗೂ ಭಾನುಕ ರಾಜಪಕ್ಷ (42 ರನ್, 32 ಎಸೆತ, 2 ಬೌಂಡರಿ, 2 ಸಿಕ್ಸರ್) ಜೋಡಿ ಕಟ್ಟಿದ ಅದ್ಭುತ ಇನಿಂಗ್ಸ್ ಲವಾಗಿ 4 ವಿಕೆಟ್‌ಗೆ 187 ರನ್ ಕಲೆಹಾಕಿತು. ಬಳಿಕ ಅಂಬಟಿ ರಾಯುಡು (78ರನ್, 39 ಎಸೆತ, 7 ಬೌಂಡರಿ, 6 ಸಿಕ್ಸರ್) ಪ್ರತಿಹೋರಾಟದ ನಡುವೆಯೂ ಸಿಎಸ್‌ಕೆ ತಂಡ 6 ವಿಕೆಟ್‌ಗೆ 176 ರನ್‌ಗಳಿಸಲಷ್ಟೇ ಶಕ್ತವಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net