ಸನ್‌ರೈಸರ್ಸ್‌ ಪ್ಲೇಆಫ್ ಹೋರಾಟ ಜೀವಂತ; ಮುಂಬೈ ಇಂಡಿಯನ್ಸ್‌ಗೆ 10ನೇ ಸೋಲು

ipl-15 mumbai and srh match for web
Published on

ಮುಂಬೈ: ವನ್‌ಡೌನ್ ಬ್ಯಾಟರ್ ರಾಹುಲ್ ತ್ರಿಪಾಠಿ (76 ರನ್, 44 ಎಸೆತ, 9 ಬೌಂಡರಿ, 3 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ಹಾಗೂ ವೇಗದ ಬೌಲರ್ ಉಮ್ರಾನ್ ಮಲಿಕ್ (23ಕ್ಕೆ 3) ಮಾರಕ ದಾಳಿ ನೆರವಿನಿಂದ ಸನ್‌ರೈಸರ್ಸ್‌ ಹೈದರಾಬಾದ್ ತಂಡ ಐಪಿಎಲ್-15ರ ಪಂದ್ಯದಲ್ಲಿ 3 ರನ್‌ಗಳಿಂದ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿತು. ಸತತ 5 ಸೋಲುಗಳಿಂದ ಕಂಗೆಟ್ಟಿದ್ದ ಸನ್‌ರೈಸರ್ಸ್‌ ಗೆಲುವಿನ ಹಳಿಗೇರುವುದರ ಜತೆಗೆ ಪ್ಲೇಆಫ್ ರೇಸ್‌ನಲ್ಲಿ ಉಳಿಯಿತು. ಮತ್ತೊಂದೆಡೆ, ಮುಂಬೈ ಇಂಡಿಯನ್ಸ್‌ಗೆ 10ನೇ ಸೋಲು ಇದಾಗಿದೆ.

ಮೊದಲು ಬ್ಯಾಟಿಂಗ್ ಮಾಡಿದ ಸನ್‌ರೈಸರ್ಸ್‌, ರಾಹುಲ್ ತ್ರಿಪಾಠಿ, ಯುವ ಬ್ಯಾಟರ್ ಪ್ರಿಯಂ ಗಾರ್ಗ್ (42) ಹಾಗೂ ನಿಕೋಲಸ್ ಪೂರನ್ (38) ಬಿರುಸಿನ ಬ್ಯಾಟಿಂಗ್ ಫಲವಾಗಿ 6 ವಿಕೆಟ್‌ಗೆ 193 ರನ್ ಕಲೆಹಾಕಿತು. ಬಳಿಕ ರೋಹಿತ್ ಶರ್ಮ (48ರನ್, 36 ಎಸೆತ, 2 ಬೌಂಡರಿ, 4 ಸಿಕ್ಸರ್) ಹಾಗೂ ಇಶಾನ್ ಕಿಶನ್ (43 ರನ್, 34 ಎಸೆತ, 5 ಬೌಂಡರಿ, 1 ಸಿಕ್ಸರ್) ಜೋಡಿಯ ಬಿರುಸಿನ ಆರಂಭದ ನಡುವೆಯೂ 7 ವಿಕೆಟ್‌ಗೆ 190 ರನ್‌ಗಳಿಸಲಷ್ಟೇ ಶಕ್ತವಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net