ಗುಜರಾತ್ ಎದುರು ಮುಂಬೈ ಇಂಡಿಯನ್ಸ್‌ಗೆ 5 ರನ್‌ಗಳ ರೋಚಕ ಜಯ

ipl-15 mumbai and gujarat titans match for web
Published on

ಮುಂಬೈ: ಅಂತಿಮ ಕ್ಷಣದವರೆಗೂ ಜಿದ್ದಾಜಿದ್ದಿನಿಂದ ಕೂಡಿದ ಹಣಾಹಣಿಯಲ್ಲಿ ಮೇಲುಗೈ ಸಾಧಿಸಲು ಯಶಸ್ವಿಯಾದ ಮುಂಬೈ ಇಂಡಿಯನ್ಸ್ ತಂಡ ಐಪಿಎಲ್-15ರ ತನ್ನ 10ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡದ ಎದುರು 5 ರನ್‌ಗಳ ರೋಚಕ ಗೆಲುವು ದಾಖಲಿಸಿತು. ಸತತ 8 ಸೋಲುಗಳೊಂದಿಗೆ ಈಗಾಗಲೇ ಪ್ಲೇಆಫ್ ರೇಸ್‌ನಿಂದ ಹೊರಬಿದ್ದಿರುವ ಮುಂಬೈಗೆ ಸತತ 2ನೇ ಗೆಲುವು ದಾಖಲಿಸಿತು. ಅಂಕಪಟ್ಟಿಯ ಅಗ್ರಸ್ಥಾನಿ ಹಾರ್ದಿಕ್ ಪಾಂಡ್ಯ ಬಳಗ ಸತತ 2ನೇ ಸೋಲನುಭವಿಸಿತು. ಇನ್ನೀಗ ಪ್ಲೇಆಫ್ ಹಂತ ಖಚಿತಪಡಿಸಿಕೊಳ್ಳಲು ಗುಜರಾತ್ ತಂಡ ಇನ್ನಷ್ಟು ಕಾಯಬೇಕಾಗಿದೆ.

ಬ್ರಬೋರ್ನ್ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡ, ಇಶಾನ್ ಕಿಶನ್ (45) ಹಾಗೂ ರೋಹಿತ್ ಶರ್ಮ (43) ಜೋಡಿಯ ಬಿರುಸಿನ ಬ್ಯಾಟಿಂಗ್ ಫಲವಾಗಿ 6 ವಿಕೆಟ್‌ಗೆ 177 ರನ್‌ಗಳಿಸಿತು. ಪ್ರತಿಯಾಗಿ ಶುಭಮಾನ್ ಗಿಲ್ (52) ಹಾಗೂ ವೃದ್ಧಿಮಾನ್ ಸಾಹ (52) ಜೋಡಿ ಉತ್ತಮ ಆರಂಭ ನೀಡಿದರೂ ಕಡೇ ಹಂತದಲ್ಲಿ ಎಡವಿದ ಗುಜರಾತ್ 5 ವಿಕೆಟ್‌ಗೆ 172 ರನ್ ಗಳಿಸಲಷ್ಟೇ ಶಕ್ತವಾಯಿತು. ಕೊನೇ ಓವರ್‌ನಲ್ಲಿ ಗುಜರಾತ್‌ಗೆ 9 ರನ್ ಬೇಕಿದ್ದಾಗ ಡೇನಿಯಲ್ ಸ್ಯಾಮ್ಸ್ 3 ರನ್ ಮಾತ್ರ ಬಿಟ್ಟುಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net