ಲಖನೌ ಎದುರು ಅಬ್ಬರಿಸಿದ ರಾಜಸ್ಥಾನ ರಾಯಲ್ಸ್; ಪ್ಲೇಆಫ್ ಹಂತಕ್ಕೆ ಮತ್ತಷ್ಟು ಸನಿಹವಾದ ಸ್ಯಾಮ್ಸನ್ ಪಡೆ

ipl-15 royals and lsg match for web
Published on

ಮುಂಬೈ: ರಾಜಸ್ಥಾನ ಬೌಲರ್‌ಗಳ ಎದುರು ರನ್‌ಗಳಿಸಲು ಪರದಾಡಿದ ಲಖನೌ ಸೂಪರ್‌ಜೈಂಟ್ಸ್ ತಂಡ ಐಪಿಎಲ್-15ರ ತನ್ನ 13ನೇ ಪಂದ್ಯದಲ್ಲಿ 24 ರನ್‌ಗಳಿಂದ ಶರಣಾಯಿತು. ಪ್ಲೇಆಫ್ ಹಂತದ ಖಾತ್ರಿಯ ನಿರೀಕ್ಷೆಯಲ್ಲಿದ್ದ ಕನ್ನಡಿಗ ಕೆಎಲ್ ರಾಹುಲ್ ಪಡೆ ನಿರಾಸೆ ಅನುಭವಿಸಿದರೆ, ಗೆಲುವಿನ ಹಳಿಗೇರಿದ ರಾಜಸ್ಥಾನ ತಂಡ ಪ್ಲೇಆಫ್ ಹಂತಕ್ಕೆ ಮತ್ತಷ್ಟು ಸನಿಹವಾಯಿತು. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲೂ ಸಂಘಟಿತ ಹೋರಾಟ ತೋರಿದ ಮಾಜಿ ಚಾಂಪಿಯನ್ ರಾಯಲ್ಸ್ ತಂಡದ ನಿರ್ವಹಣೆ ಗಮನಸೆಳೆಯಿತು.

ಬ್ರಬೋರ್ನ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ರಾಯಲ್ಸ್ ತಂಡ, ಆರಂಭಿಕ ಹಂತದಲ್ಲಿ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ (41ರನ್, 29 ಎಸೆತ, 6 ಬೌಂಡರಿ, 1 ಸಿಕ್ಸರ್), ಕನ್ನಡಿಗ ದೇವದತ್ ಪಡಿಕಲ್ (39ರನ್, 18 ಎಸೆತ, 5 ಬೌಂಡರಿ, 2 ಸಿಕ್ಸರ್) ಕೆಲಕಾಲ ಅಬ್ಬರಿಸಿದ ಪರಿಣಾಮ 6 ವಿಕೆಟ್‌ಗೆ 178 ರನ್ ಕಲೆಹಾಕಿತು. ಪ್ರತಿಯಾಗಿ ದೀಪಕ್ ಹೂಡಾ (59ರನ್, 39 ಎಸೆತ, 5 ಬೌಂಡರಿ, 2 ಸಿಕ್ಸರ್) ಪ್ರತಿರೋಧದ ನಡುವೆಯೂ ಲಖನೌ ತಂಡ 8 ವಿಕೆಟ್‌ಗೆ 154 ರನ್‌ಗಳಿಸಲಷ್ಟೇ ಶಕ್ತವಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net