ಕೆಕೆಆರ್ ಎದುರು ಲಖನೌ ಸೂಪರ್‌ಜೈಂಟ್ಸ್ ಸವಾರಿ ; ಅಗ್ರಸ್ಥಾನಕ್ಕೇರಿದ ಕೆಎಲ್ ರಾಹುಲ್ ಪಡೆ

ipl-15 lsg and kkr match for web
Published on

ಪುಣೆ: ಬ್ಯಾಟರ್‌ಗಳ ಸಂಘಟಿತ ಹೋರಾಟದ ಬಳಿಕ ವೇಗಿಗಳಾದ ಆವೇಶ್ ಖಾನ್ (19ಕ್ಕೆ 3) ಹಾಗೂ ಜೇಸನ್ ಹೋಲ್ಡರ್ (31ಕ್ಕೆ 3) ಜೋಡಿಯ ಮಾರಕ ದಾಳಿ ನೆರವಿನಿಂದ ಲಖನೌ ಸೂಪರ್ ಜೈಂಟ್ಸ್ ತಂಡ ಐಪಿಎಲ್-15ರ ಪಂದ್ಯದಲ್ಲಿ 75 ರನ್‌ಗಳಿಂದ ಎರಡು ಬಾರಿ ಚಾಂಪಿಯನ್ ಕೋಲ್ಕತ ನೈಟ್ ರೈಡರ್ಸ್‌ ತಂಡವನ್ನು ಸೋಲಿಸಿತು. ಈ ಮೂಲಕ 8ನೇ ಗೆಲುವು ದಾಖಲಿಸಿದ ಕನ್ನಡಿಗ ಕೆಎಲ್ ರಾಹುಲ್ ಸಾರಥ್ಯದ ಬಳಗ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವುದರ ಜತೆಗೆ ಪ್ಲೇಆಫ್ ಹಂತಕ್ಕೆ ಮತ್ತಷ್ಟು ಸನಿಹವಾಯಿತು. ಮತ್ತೊಂದೆಡೆ, 7ನೇ ಸೋಲು ಕಂಡ ಕೆಕೆಆರ್ ತಂಡದ ಮುಂದಿನ ಹಾದಿ ಬಹುತೇಕ ಬಂದ್ ಆಯಿತು.

ಮಹಾರಾಷ್ಟ್ರ ಕ್ರಿಕೆಟ್ ಸ್ಟೇಡಿಯಂನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಎಲ್‌ಎಸ್‌ಜಿ, ಕ್ವಿಂಟನ್ ಡಿಕಾಕ್ (50ರನ್, 29 ಎಸೆತ, 4 ಬೌಂಡರಿ, 3 ಸಿಕ್ಸರ್) ಹಾಗೂ ದೀಪಕ್ ಹೂಡಾ (41ರನ್, 27 ಎಸೆತ, 4 ಬೌಂಡರಿ, 2 ಸಿಕ್ಸರ್) ಜೋಡಿಯ ಜವಾಬ್ದಾರಿಯುತ ಲವಾಗಿ 7 ವಿಕೆಟ್‌ಗೆ 176 ರನ್‌ಗಳಿಸಿತು. ಭರ್ಜರಿ ಲಯದಲ್ಲಿರುವ ನಾಯಕ ಕೆಎಲ್ ರಾಹುಲ್ ಮೊದಲ ಓವರ್‌ನಲ್ಲೇ ಡೈಮಂಡ್ ಡಕ್ (ಒಂದೂ ಎಸೆತ ಎದುರಿಸದೆ ಔಟ್) ಬಿದ್ದರೂ ಇತರ ಬ್ಯಾಟರ್‌ಗಳು ಕೆಕೆಆರ್ ಬೌಲರ್‌ಗಳಿಗೆ ತಿರುಗೇಟು ನೀಡಿದರು. ಬಳಿಕ ಹೋಲ್ಡರ್-ಆವೇಶ್ ದಾಳಿಗೆ ನಲುಗಿದ ಕೆಕೆಆರ್ 14.3 ಓವರ್‌ಗಳಲ್ಲಿ 101 ರನ್‌ಗಳಿಗೆ ಸರ್ವಪತನ ಕಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net