ಆಂಡ್ರೆ ರಸೆಲ್ ಆಲ್ರೌಂಡ್ ನಿರ್ವಹಣೆ ಎದುರು ಮಂಕಾದ ಸನ್‌ರೈಸರ್ಸ್‌; ಕೆಕೆಆರ್ ಪ್ಲೇಆಫ್ ಹೋರಾಟ ಜೀವಂತ

ipl-15 kkr and srh match for web
Published on

ಪುಣೆ: ಆಲ್ರೌಂಡರ್ ಆಂಡ್ರೆ ರಸೆಲ್ (49*ರನ್, 28 ಎಸೆತ, 3 ಬೌಂಡರಿ, 4 ಸಿಕ್ಸರ್, 22ಕ್ಕೆ 3) ಆಲ್ರೌಂಡ್ ನಿರ್ವಹಣೆ ನೆರವಿನಿಂದ ಎರಡು ಬಾರಿ ಚಾಂಪಿಯನ್ ಕೋಲ್ಕತ ನೈಟ್‌ರೈಡರ್ಸ್‌ ತಂಡ ಐಪಿಎಲ್-15ರ ತನ್ನ ನಿರ್ಣಾಯಕ ಹಣಾಹಣಿಯಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ತಂಡವನ್ನು 54 ರನ್‌ಗಳಿಂದ ಮಣಿಸಿ ಪ್ಲೇಆಫ್ ರೇಸ್‌ನಲ್ಲಿ ಉಳಿಸಿತು. ಮತ್ತೊಂದೆಡೆ, ಸತತ 5ನೇ ಸೋಲು ಕಂಡ ಕೇನ್ ವಿಲಿಯಮ್ಸನ್ ಬಳಗ ಮುಂದಿನ ಹಾದಿ ಮತ್ತಷ್ಟು ಕ್ಷೀಣಿಸಿತು. ಶ್ರೇಯಸ್ ಅಯ್ಯರ್ ಬಳಗ ಜಯ ದಾಖಲಿಸಿದರೂ ಪ್ಲೇಆಫ್ ಹಾದಿ ಇತರ ಪಂದ್ಯಗಳ ಲಿತಾಂಶದ ಮೇಲೆ ಅವಲಂಭಿಸಿದೆ.

ಮಹಾರಾಷ್ಟ್ರ ಕ್ರಿಕೆಟ್ ಸ್ಟೇಡಿಯಂನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್, ಆಂಡ್ರೆ ರಸೆಲ್ ಹಾಗೂ ಸ್ಯಾಮ್ ಬಿಲಿಂಗ್ಸ್ (34ರನ್, 29 ಎಸೆತ, 3 ಬೌಂಡರಿ, 1 ಸಿಕ್ಸರ್) ನೆರವಿನಿಂದ 6 ವಿಕೆಟ್‌ಗೆ 177 ರನ್ ಪೇರಿಸಿತು. ಪ್ರತಿಯಾಗಿ ಸನ್‌ರೈಸರ್ಸ್‌ ಅಭಿಷೇಕ್ ಶರ್ಮ (43ರನ್, 28 ಎಸೆತ, 4 ಬೌಂಡರಿ, 2 ಸಿಕ್ಸರ್) ಬಿರುಸಿನ ಆರಂಭದ ನಡುವೆಯೂ 8 ವಿಕೆಟ್‌ಗೆ 123 ರನ್‌ಗಳಿಸಲಷ್ಟೇ ಶಕ್ತವಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net