ಸನ್‌ರೈಸರ್ಸ್‌ ಹೈದರಾಬಾದ್ ತಂಡಕ್ಕೆ ಹ್ಯಾಟ್ರಿಕ್ ಜಯ; ಕೆಕೆಆರ್ ಎದುರು 7 ವಿಕೆಟ್ ಗೆಲುವು

srh & kkr web
Published on

ಮುಂಬೈ: ಬೌಲರ್‌ಗಳ ಕರಾರುವಾಕ್ ದಾಳಿಯ ಜತೆಗೆ ಭರವಸೆಯ ಬ್ಯಾಟರ್ ರಾಹುಲ್ ತ್ರಿಪಾಠಿ (71ರನ್, 37 ಎಸೆತ, 4 ಬೌಂಡರಿ, 6 ಸಿಕ್ಸರ್) ಹಾಗೂ ಏಡನ್ ಮಾರ್ಕ್ರಮ್ (68*ರನ್, 36 ಎಸೆತ, 6 ಬೌಂಡರಿ, 4 ಸಿಕ್ಸರ್) ಜೋಡಿಯ ಬಿರುಸಿನ ಬ್ಯಾಟಿಂಗ್ ನೆರವಿನಿಂದ ಸನ್‌ರೈಸರ್ಸ್‌ ಹೈದರಾಬಾದ್ ತಂಡ ಐಪಿಎಲ್-15ರಲ್ಲಿ ಹ್ಯಾಟ್ರಿಕ್ ಗೆಲುವಿನ ನಗೆ ಬೀರಿತು. ಬ್ರಬೋರ್ನ್ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಕೇನ್ ವಿಲಿಯಮ್ಸನ್ ಬಳಗ 7 ವಿಕೆಟ್‌ಗಳಿಂದ ಕೋಲ್ಕತ ನೈಟ್ ರೈಡರ್ಸ್‌ ತಂಡವನ್ನು ಸೋಲಿಸಿತು. ಆರಂಭಿಕ ಎರಡೂ ಪಂದ್ಯಗಳಲ್ಲಿ ಸೋಲನುಭವಿಸಿದ್ದ ಸನ್‌ರೈಸರ್ಸ್‌, ಇದೀಗ ಜಯದ ನಾಗಾಲೋಟ ಮುಂದುವರಿಸಿದೆ. ಮತ್ತೊಂದೆಡೆ, ಕೆಕೆಆರ್ ತಂಡಕ್ಕೆ ಸತತ 2ನೇ ಸೋಲು ಇದಾಗಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿ ಕೆಕೆಆರ್, ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳಾದ ನಿತೀಶ್ ರಾಣಾ (54ರನ್, 36 ಎಸೆತ, 6 ಬೌಂಡರಿ, 2 ಸಿಕ್ಸರ್) ಹಾಗೂ ಆಂಡ್ರೆ ರಸೆಲ್ (49*ರನ್, 25 ಎಸೆತ, 4 ಬೌಂಡರಿ, 4 ಸಿಕ್ಸರ್) ಜವಾಬ್ದಾರಿಯುತ ಇನಿಂಗ್ಸ್ ಫಲವಾಗಿ 8 ವಿಕೆಟ್‌ಗೆ 175 ರನ್ ಕಲೆಹಾಕಿತು. ಬಳಿಕ ಸನ್‌ರೈಸರ್ಸ್‌ ರಾಹುಲ್ ತ್ರಿಪಾಠಿ-ಮಾರ್ಕ್ರಮ್ ಜೋಡಿಯ ಬಿರುಸಿನ ಬ್ಯಾಟಿಂಗ್ ನೆರವಿನಿಂದ 17.5 ಓವರ್‌ಗಳಲ್ಲಿ 3 ವಿಕೆಟ್‌ಗೆ 176 ರನ್‌ಗಳಿಸಿ ಜಯ ದಾಖಲಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net