ಗುಜರಾತ್ ಟೈಟಾನ್ಸ್ ಎದುರು ಗೆದ್ದರಷ್ಟೇ ಕೆಕೆಆರ್‌ಗೆ ಉಳಿಗಾಲ

gt vs kkr for web
Published on

ಮುಂಬೈ: ಹ್ಯಾಟ್ರಿಕ್ ಸೋಲಿನಿಂದ ಕಂಗೆಟ್ಟಿರುವ 2 ಬಾರಿಯ ಚಾಂಪಿಯನ್ ಕೋಲ್ಕತ ನೈಟ್‌ರೈಡರ್ಸ್‌ ಹಾಗೂ ಹ್ಯಾಟ್ರಿಕ್ ಜಯದ ಮೇಲೆ ಕಣ್ಣಿಟ್ಟಿರುವ ಗುಜರಾತ್ ಟೈಟಾನ್ಸ್ ತಂಡಗಳು ಐಪಿಎಲ್-15ರ ಪಂದ್ಯದಲ್ಲಿ ಶನಿವಾರ ಎದುರಾಗಲಿವೆ. ಸತತ ಸೋಲುಗಳಿಂದ ಕಂಗೆಟ್ಟಿರುವ ಕೆಕೆಆರ್ ಸದ್ಯ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದ್ದು, ಟೈಟಾನ್ಸ್ ಎದುರು ಗೆಲುವಿನ ಒತ್ತಡದಲ್ಲಿದೆ. ಬ್ಯಾಟಿಂಗ್ ಹಾಗು ಬೌಲಿಂಗ್ ಎರಡೂ ವಿಭಾಗಗಳಲ್ಲೂ ಬಲಿಷ್ಠ ನಿರ್ವಹಣೆ ತೋರುತ್ತಿರುವ ಟೈಟಾನ್ಸ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಳ್ಳುವ ವಿಶ್ವಾಸದಲ್ಲಿದೆ. ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆಯಲಿರುವ ಕದನ ಕೆಕೆಆರ್ ಪಾಲಿಗೆ ಮಹತ್ವ ಪಡೆದಿದೆ.

ಟೀಮ್ ನ್ಯೂಸ್:

ಗುಜರಾತ್ ಟೈಟಾನ್ಸ್: ಸಿಎಸ್‌ಕೆ ಎದುರು ತೊಡೆಸಂಧು ನೋವಿನಿಂದಾಗಿ ಹೊರಗುಳಿದಿದ್ದ ನಾಯಕ ಹಾರ್ದಿಕ್ ಪಾಂಡ್ಯ ಹನ್ನೊಂದರ ಬಳಗಕ್ಕೆ ಮರಳಲಿದ್ದಾರೆ. ಫಾರ್ಮ್ ಕೊರತೆ ಎದುರಿಸುತ್ತಿರುವ ವಿಜಯ್ ಶಂಕರ್ ಬದಲಿಗೆ ಸಾಯಿ ಸುದರ್ಶನ್ ವಾಪಸಾಗಬಹುದು.

ಕೆಕೆಆರ್: ಅನುಭವಿ ಟಿಮ್ ಸೌಥಿ ಅವರನ್ನು ಹನ್ನೊಂದರ ಬಳಗಕ್ಕೆ ವಾಪಸ್ ತರುವ ಚಿಂತನೆ ಮಾಡಿದರೆ, ಪ್ಯಾಟ್ ಕಮ್ಮಿನ್ಸ್ ಹೊರಗುಳಿಯುವುದು ಅನಿವಾರ್ಯ.

ಪಂದ್ಯ ಆರಂಭ: ಮಧ್ಯಾಹ್ನ 3.30ಕ್ಕೆ

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net