ಇಂದು ಶ್ರೇಯಸ್ ಅಯ್ಯರ್ ವರ್ಸಸ್ ರಿಷಭ್ ಪಂತ್

ipl-15 kkr and delhi match preview for web
Published on

ಮುಂಬೈ: ಹ್ಯಾಟ್ರಿಕ್ ಸೋಲಿನ ಭೀತಿಯಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿರುವ ಹಾಲಿ ರನ್ನರ್‌ಅಪ್ ಕೋಲ್ಕತ ನೈಟ್‌ರೈಡರ್ಸ್‌ ತಂಡಗಳು ಐಪಿಎಲ್-15ರಲ್ಲಿ ಭಾನುವಾರದ ಮೊದಲ ಪಂದ್ಯದಲ್ಲಿ ಎದುರಾಗಲಿವೆ. ಟೀಮ್ ಇಂಡಿಯಾದ ಭವಿಷ್ಯದ ನಾಯಕತ್ವದ ಮೇಲೆ ಕಣ್ಣಿಟ್ಟಿರುವ 27 ವರ್ಷದ ಶ್ರೇಯಸ್ ಅಯ್ಯರ್ ಹಾಗೂ ರಿಷಭ್ ಪಂತ್‌ಗೆ ವೈಯಕ್ತಿಕವಾಗಿ ಈ ಪಂದ್ಯ ಪ್ರಮುಖವಾಗಿದೆ. ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆಯಲಿರುವ ಕದನ ಯುವ ನಾಯಕರ ಪಾಲಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಕಳೆದ ವರ್ಷದವರೆಗೆ ಡೆಲ್ಲಿ ತಂಡದಲ್ಲೇ ಇದ್ದ ಶ್ರೇಯಸ್ ಈ ಬಾರಿ ಕೆಕೆಆರ್ ನಾಯಕರಾಗಿ ಎದುರಾಳಿ ಪಾಳಯದಲ್ಲಿರುವುದು ಗಮನಾರ್ಹ. ಬ್ಯಾಟರ್‌ಗಳ ಅಬ್ಬರದಿಂದಾಗಿ ಉತ್ತಮ ರನ್‌ರೇಟ್ ಹೊಂದಿರುವ ಶ್ರೇಯಸ್ ಅಯ್ಯರ್ ಸಾರಥ್ಯದ ಕೆಕೆಆರ್ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ಆರ್‌ಸಿಬಿ ಎದುರು ಸೋಲು ಕಂಡ ಬಳಿಕ ಪಂಜಾಬ್ ಹಾಗೂ ಮುಂಬೈ ತಂಡಗಳು ಎದುರು ಭರ್ಜರಿ ಗೆಲುವು ದಾಖಲಿಸಿತ್ತು. ಅಗ್ರ ಕ್ರಮಾಂಕದಲ್ಲಿ ಅಜಿಂಕ್ಯ ರಹಾನೆ ರನ್‌ಬರ ನೀಗಿಸಿಕೊಳ್ಳಬೇಕಿದೆ. ಮತ್ತೊಂದೆಡೆ, ಮೊದಲ ಪಂದ್ಯದಲ್ಲಿ ಮುಂಬೈ ತಂಡವನ್ನು ಮಣಿಸಿದ್ದ ಡೆಲ್ಲಿ ಬಳಿಕ ಗುಜರಾತ್ ಹಾಗೂ ಎಲ್‌ಎಸ್‌ಜಿ ತಂಡಗಳ ಎದುರು ನಿರಾಸೆ ಕಂಡಿತ್ತು. ಡೇವಿಡ್ ವಾರ್ನರ್ ಮತ್ತು ಅನ್ರಿಚ್ ನೋಕಿಯ ಕಳೆದ ಪಂದ್ಯದಲ್ಲೇ ತಂಡವನ್ನು ಕೂಡಿಕೊಂಡಿದ್ದರೂ, ವೈಫಲ್ಯ ಕಂಡಿದ್ದರು. ಡೆಲ್ಲಿ ಗೆಲುವಿನ ಲಯಕ್ಕೆ ಮರಳಲು ಸಂಘಟಿತ ನಿರ್ವಹಣೆ ಅಗತ್ಯವಾಗಿದೆ.

ಟೀಮ್ ನ್ಯೂಸ್:

ಡೆಲ್ಲಿ ಕ್ಯಾಪಿಟಲ್ಸ್: ಸತತ 2 ಸೋಲಿನ ನಡುವೆಯೂ ತಂಡದಲ್ಲಿ ಬದಲಾವಣೆ ಸಾಧ್ಯತೆ ಇಲ್ಲ. ಆದರೆ ವಾರ್ನರ್, ನೋಕಿಯ ನಿರೀಕ್ಷೆಗೆ ತಕ್ಕ ನಿರ್ವಹಣೆ ತೋರಬೇಕಿದೆ.

ಕೆಕೆಆರ್: ಹ್ಯಾಟ್ರಿಕ್ ಗೆಲುವಿನ ಕನಸಿನಲ್ಲಿರುವ ಕೆಕೆಆರ್ ತಂಡದಲ್ಲಿ ಬದಲಾವಣೆ ನಿರೀಕ್ಷೆ ಇಲ್ಲ.

*4: ಬ್ರಬೋರ್ನ್ ಸ್ಟೇಡಿಯಂನಲ್ಲಿ ಮೊದಲ ಇನಿಂಗ್ಸ್‌ನ ಸರಾಸರಿ 7 ವಿಕೆಟ್‌ಗೆ 189 ರನ್. ಇದುವರೆಗೆ ನಡೆದಿರುವ 4 ಪಂದ್ಯಗಳ ಪೈಕಿ 3 ಬಾರಿ ಚೇಸಿಂಗ್ ತಂಡಗಳೇ ಗೆದ್ದಿವೆ.

ಪಂದ್ಯ ಆರಂಭ: ಮಧ್ಯಾಹ್ನ 3.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

ಮುಖಾಉಖಿ: 29, ಕೋಲ್ಕತ: 16, ಡೆಲ್ಲಿ: 12, ರದ್ದು: 1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net