ಸಿಎಸ್‌ಕೆ ತಂಡಕ್ಕೆ ಮತ್ತೆ ಎಂಎಸ್ ಧೋನಿ ಸಾರಥ್ಯ

ipl-15 dhoni retains as csk captain for web
Published on

ಮುಂಬೈ: ಐಪಿಎಲ್-15ರ ಆರಂಭಕ್ಕೆ 2 ದಿನ ಮೊದಲಷ್ಟೇ ಸಿಎಸ್‌ಕೆ ನಾಯಕತ್ವ ವಹಿಸಿಕೊಂಡಿದ್ದ ಜಡೇಜಾ, 8 ಪಂದ್ಯಗಳಿಗೆ ಸುಸ್ತಾಗಿದ್ದಾರೆ. ತಂಡದ ಜತೆಗೆ ಜಡೇಜಾರ ವೈಯಕ್ತಿಕ ಫಾರ್ಮ್ ಕೂಡ ಕುಸಿದಿತ್ತು. ಇದರಿಂದಾಗಿ ಜಡೇಜಾ ತಮ್ಮ ಆಟದತ್ತ ಗಮನ ಕೇಂದ್ರೀಕರಿಸಲು ಬಯಸಿ ನಾಯಕತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಜತೆಗೆ ಧೋನಿಗೆ ಮತ್ತೆ ತಂಡ ಮುನ್ನಡೆಸುವಂತೆ ಮನವಿ ಸಲ್ಲಿಸಿದ್ದರು. ಇದಕ್ಕೆ ಸಮ್ಮತಿಸಿರುವ ಧೋನಿ, ಟೂರ್ನಿಯ ಉಳಿದ ಪಂದ್ಯಗಳಲ್ಲಿ ಸಿಎಸ್‌ಕೆ ತಂಡವನ್ನು ಮುನ್ನಡೆಸಲು ಒಪ್ಪಿಕೊಂಡಿದ್ದಾರೆ. ತಂಡದ ಹಿತದೃಷ್ಟಿಯಿಂದ ಧನಿ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಸಿಎಸ್‌ಕೆ ತಂಢದ ಮೂಲಗಳು ತಿಳಿಸಿವೆ.

ಜಡೇಜಾ ಸಾರಥ್ಯದಲ್ಲಿ ಸಿಎಸ್‌ಕೆ ಆರಂಭಿಕ 4 ಪಂದ್ಯಗಳಲ್ಲೂ ಸೋಲು ಕಂಡಿತ್ತು. ಇದುವರೆಗೂ ಆಡಿರುವ 8 ಪಂದ್ಯಗಳಲ್ಲಿ ಕೇವಲ 2 ಜಯ ದಾಖಲಿಸಿರುವ ಸಿಎಸ್‌ಕೆ ಮುಂದಿನ ಎಲ್ಲ ಪಂದ್ಯಗಳಲ್ಲೂ ಗೆದ್ದರಷ್ಟೇ ಪ್ಲೇಆ್ ಹಂತಕ್ಕೇರುವ ಅವಕಾಶ ಉಳಿಸಿಕೊಂಡಿದೆ. ಎಂಸಿಎ ಸ್ಟೇಡಿಯಂನಲ್ಲಿ ಭಾನುವಾರ ನಡೆಯಲಿರುವ ಐಪಿಎಲ್-15ರ ಹಣಾಹಣಿಯಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ವಿರುದ್ಧ ಸಿಎಸ್‌ಕೆ ತಂಡವನ್ನು ಮರಳಿ ಗೆಲುವಿನ ಲಯಕ್ಕೆ ತರಲು ಧೋನಿ ಪ್ರಯತ್ನಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net