

ಮುಂಬೈ: ಇಂಗ್ಲೆಂಡ್ ಆಟಗಾರ ಲಿಯಾಮ್ ಲಿವಿಂಗ್‌ಸ್ಟೋನ್ (60 ರನ್, 32 ಎಸೆತ, 5 ಬೌಂಡರಿ, 5 ಸಿಕ್ಸರ್, 25ಕ್ಕೆ 2 ವಿಕೆಟ್) ಆಲ್ರೌಂಡ್ ನಿರ್ವಹಣೆ ನೆರವಿನಿಂದ ಪಂಜಾಬ್ ಕಿಂಗ್ಸ್ ತಂಡ ಐಪಿಎಲ್-15ರ ತನ್ನ 3ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 54 ರನ್‌ಗಳಿಗೆ ಸೋಲಿಸಿತು. ಈ ಮೂಲಕ ಆಲ್ರೌಂಡರ್ ರವೀಂದ್ರ ಜಡೇಜಾ ಸಾರಥ್ಯದ ಸಿಎಸ್‌ಕೆ ಟೂರ್ನಿಯ ಇತಿಹಾಸದಲ್ಲೇ ಮೊದಲ ಬಾರಿಗೆ ಆರಂಭಿಕ ಮೂರು ಪಂದ್ಯಗಳಲ್ಲೂ ಸೋಲಿನ ರುಚಿ ಕಂಡಿತು. ಕಳೆದ ಪಂದ್ಯದಲ್ಲಿ ಕೆಕೆಆರ್ ಎದುರು ಹೀನಾಯ ಸೋಲು ಕಂಡಿದ್ದ ಕನ್ನಡಿಗ ಮಯಾಂಕ್ ಅಗರ್ವಾಲ್ ಸಾರಥ್ಯದ ಪಂಜಾಬ್ ಗೆಲುವಿನ ಹಳಿಗೇರಿತು.
ಬ್ರಬೋರ್ನ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ 8 ವಿಕೆಟ್‌ಗೆ 180 ರನ್ ಪೇರಿಸಿತು. ನಂತರ ಪಂಜಾಬ್ ಬೌಲರ್‌ಗಳ ಸಂಘಟತ ಹೋರಾಟಕ್ಕೆ ತಲೆಬಾಗಿದ ಸಿಎಸ್‌ಕೆ 18 ಓವರ್‌ಗಳಲ್ಲಿ 126 ರನ್‌ಗಳಿಗೆ ಸರ್ವಪತನ ಕಂಡಿತು.
ಪಂಜಾಬ್ ಕಿಂಗ್ಸ್: 8 ವಿಕೆಟ್‌ಗೆ 180 (ಶಿಖರ್ ಧವನ್ 33, ಲಿಯಾಮ್ ಲಿವಿಂಗ್‌ಸ್ಟೋನ್ 60, ಜಿತೇಶ್ ಶರ್ಮ 26, ಕ್ರಿಸ್ ಜೋರ್ಡಾನ್ 23ಕ್ಕೆ 2, ಡ್ವೇನ್ ಪ್ರಿಟೋರಿಯಸ್ 30ಕ್ಕೆ 2), ಸಿಎಸ್‌ಕೆ: 18 ಓವರ್‌ಗಳಲ್ಲಿ 126 (ಶಿವಂ ದುಬೆ 57, ಎಂಎಸ್ ಧೋನಿ 23, ರಾಬಿನ್ ಉತ್ತಪ್ಪ 13, ರಾಹುಲ್ ಚಹರ್ 25ಕ್ಕೆ 3, ಲಿಯಮ್ ಲಿವಿಂಗ್‌ಸ್ಟೋನ್ 25ಕ್ಕೆ 2, ವೈಭವ್ ಅರೋರ 21ಕ್ಕೆ 2).