ಇನ್ಮುಂದೆ 2028ರಿಂದ ಒಲಿಂಪಿಕ್ಸ್‌ನಲ್ಲೂ ಕ್ರಿಕೆಟ್

cricket
Published on

ನವದೆಹಲಿ: ಅಂತಾರಾಷ್ಟ್ರೀಯ ಒಲಿಂಪಿಕ್ಸ್​​ ಸಮಿತಿಯ ಅನುಮೋದನೆ ಪಡೆದ ನಂತರ 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಮತ್ತು ಫ್ಲ್ಯಾಗ್ ಫುಟ್‌ಬಾಲ್ ಸೇರಿದಂತೆ ಐದು ಕ್ರೀಡೆಗಳನ್ನು ಸೇರಿಸಲಾಗುವುದು ಎಂದು ಕಮಿಟಿ ತಿಳಿದಿದೆ.

ಕ್ರಿಕೆಟ್ ಒಲಿಂಪಿಕ್ಸ್‌ನ ಒಂದು ಭಾಗವಾಗಿದೆ. 2028 ರಲ್ಲಿ, ಲಾಸ್ ಏಂಜಲೀಸ್‌ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್‌ನಲ್ಲಿ ಐದು ಹೊಸ ಆಟಗಳಿಗೆ ಸ್ಥಾನ ನೀಡಲಾಗಿದೆ. ಅದರಲ್ಲಿ ಕ್ರಿಕೆಟ್ ಕೂಡ ಒಂದು. ಕ್ರಿಕೆಟ್ ಜೊತೆಗೆ ಬೇಸ್‌ಬಾಲ್/ಸಾಫ್ಟ್‌ಬಾಲ್, ಫ್ಲ್ಯಾಗ್ ಫುಟ್‌ಬಾಲ್, ಸ್ಕ್ವಾಷ್ ಮತ್ತು ಲ್ಯಾಕ್ರೋಸ್ ಕೂಡ ಒಲಿಂಪಿಕ್ಸ್‌ಗೆ ಪ್ರವೇಶ ಪಡೆದಿವೆ.

2028 ರಲ್ಲಿ, ಲಾಸ್ ಏಂಜಲೀಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಜೊತೆಗೆ ಇನ್ನೂ ನಾಲ್ಕು ಕ್ರೀಡೆಗಳನ್ನು ಪರಿಚಯಿಸಲು ಸಂಘಟಕರು ಪ್ರಸ್ತಾಪಿಸಿದರು. ಅಂತಾರಾಷ್ಟ್ರೀಯ ಒಲಿಂಪಿಕ್ಸ್​ ಸಮಿತಿ (ಐಒಸಿ) ಕಾರ್ಯಕಾರಿ ಮಂಡಳಿ ಶುಕ್ರವಾರ (ಅಕ್ಟೋಬರ್ 13) ಇದಕ್ಕೆ ಅನುಮೋದನೆ ನೀಡಿದೆ. ಈ ಕುರಿತು ಇಂದು ಸಭೆ ನಡೆದಿದೆ. ಈ ನಿರ್ಧಾರಕ್ಕೆ ಮಂಡಳಿಯ ಸದಸ್ಯರಲ್ಲಿ ಇಬ್ಬರು ಮಾತ್ರ ವಿರುದ್ಧವಾಗಿ ಮತ ಚಲಾಯಿಸಿದರು ಮತ್ತು ಉಳಿದವರು ಬೆಂಬಲಿಸಿದರು, ಒಲಿಂಪಿಕ್ಸ್‌ಗೆ ಐದು ಹೊಸ ಕ್ರೀಡೆಗಳ ಸೇರ್ಪಡೆಗೆ ಅನುಮೋದನೆ ನೀಡಲಾಯಿತು. ಈ ವಿಷಯವನ್ನು ಐಒಸಿ ಅಧ್ಯಕ್ಷ ಥಾಮಸ್ ಬಾಚ್ ಹೇಳಿದ್ದಾರೆ.

2028 ರ ಒಲಿಂಪಿಕ್ಸ್‌ನಲ್ಲಿ ಪುರುಷರ ಮತ್ತು ಮಹಿಳಾ ಕ್ರಿಕೆಟ್ ನಡೆಸಲಾಗುವುದು. ಪ್ರಸ್ತುತ ಕ್ರಿಕೆಟ್‌ನಲ್ಲಿ ಮೂರು ಮಾದರಿಗಳಿವೆ ಆದರೆ ಟಿ20 ಮಾದರಿಯನ್ನು ನಡೆಸಲಾಗುವುದು. ಕೇವಲ ಆರು ತಂಡಗಳೊಂದಿಗೆ ಕ್ರಿಕೆಟ್ ಪಂದ್ಯಗಳನ್ನು ನಡೆಸುವ ಸಾಧ್ಯತೆಯಿದೆ. ಇನ್ನೂ ಕೆಲವು ತಂಡಗಳು ಸೇರ್ಪಡೆಯಾಗುವ ಸಾಧ್ಯತೆ ಇದೆ ಎಂದು ಲಾಸ್ ಏಂಜಲೀಸ್ ಆಡಳಿತಾಧಿಕಾರಿಗಳು ತಿಳಿಸಿದ್ದಾರೆ.  

1900ರಲ್ಲಿ ಪ್ಯಾರಿಸ್​​​ನಲ್ಲಿ ನಡೆದ ಒಲಿಂಪಿಕ್ಸ್​​​ನಲ್ಲಿ ಮೊದಲ ಬಾರಿಗೆ ಕ್ರಿಕೆಟ್ ಅನ್ನು ಸೇರಿಸಲಾಯಿತು. ಅದರ ನಂತರ ಬೇರೆ ಯಾವುದೇ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಆಡಲಿಲ್ಲ. ಇದು ಮೊದಲ ಬಾರಿಗೆ  128 ವರ್ಷಗಳ ಬಳಿಕ ಒಪ್ಪಿಗೆ ದೊರೆತ ಬಳಿಕ ಒಲಿಂಪಿಕ್ಸ್ ನಲ್ಲಿ ಕ್ರಿಕೆಟ್ ಸ್ಪರ್ಧೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net