

ಬೆಂಗಳೂರು: ಕ್ಲೂನಿ ಕಾನ್ವೆಂಟ್ ಮತ್ತು ಸ್ಪೋರ್ಟ್ಸ್ ಸ್ಕೂಲ್ ತಂಡಗಳು ಯೊಹೊ ಬೀಗಲ್ಸ್ ವಿಂಟರ್ ಹೂಪ್ಸ್ ಅಂತರ ಶಾಲಾ ಬಾಲಕಿಯರ ಬಾಸ್ಕೆಟ್ಬಾಲ್ ಟೂರ್ನಿಯಲ್ಲಿ ಕ್ರಮವಾಗಿ 14 ಮತ್ತು 16 ವಯೋಮಿತಿ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡಿವೆ.
ಮಲ್ಲೇಶ್ವರದ ಬೀಗಲ್ಸ್ ಕ್ಲಬ್ನಲ್ಲಿ ನಡೆದ ಟೂರ್ನಿಯಲ್ಲಿ 14 ವಯೋಮಿತಿ ವಿಭಾಗದ ಫೈನಲ್ನಲ್ಲಿ ಕ್ಲೂನಿ ಕಾನ್ವೆಂಟ್ ತಂಡ 21-8ರಿಂದ ಬಿಶಪ್ ಕಾಟನ್ ತಂಡವನ್ನು ಮಣಿಸಿತು. 16 ವಯೋಮಿತಿ ವಿಭಾಗದ ಫೈನಲ್ನಲ್ಲಿ ಕ್ರೀಡಾಶಾಲಾ ತಂಡ 40-13ರಿಂದ ಕ್ಲೂನಿ ಕಾನ್ವೆಂಟ್ ತಂಡವನ್ನು ಸೋಲಿಸಿ ಪ್ರಶಸ್ತಿ ಜಯಿಸಿತು.
ಆಂಥೋನಿ ಕ್ಲಾರೆಟ್ ಮತ್ತು ಸಿಲಿಕಾಲ್ ಸಿಟಿ ತಂಡಗಳು ಕ್ರಮವಾಗಿ 14 ಮತ್ತು 16 ವಯೋಮಿತಿ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದುಕೊಂಡವು.