ಭಾರತದಲ್ಲಿ ಕ್ರಿಕೆಟ್ ಬಗ್ಗೆ ಸಿಕ್ಕಾಪಟೆ ಹುಚ್ಚು ಬೆಳೆಸಿಕೊಂಡವರು ತುಂಬ ಜನ ಇದ್ದಾರೆ. ಆಟಗಾರರನ್ನು ದೇವರಂತೆ ನೋಡುವವರೂ ಇದ್ದಾರೆ..ಹಾಗೇ ಅಷ್ಟು ರನ್ ಗಳಿಸಲಿ...ಅವರು ಗೆಲ್ಲಲಿ...ಎಂಬಿತ್ಯಾದಿ ಹರಕೆ ಹೊರುವ ಮಂದಿಗೂ ಕಡಿಮೆ ಇಲ್ಲ. ಅಷ್ಟೇ ಅಲ್ಲ ನೆಚ್ಚಿನ ಆಟಗಾರರು ಝೀರೋಕ್ಕೆ ಔಟಾಗಿ ಹೊರ ನಡೆದಾಗ ಕಣ್ಣೀರು ಹಾಕುವವರು ಅದೆಷ್ಟೋ ಮಂದಿ.
ಹಾಗೇ ಯಾವುದೋ ಆಟಗಾರ ಸೋತಾಗ ಅವರನ್ನು ಟ್ರೋಲ್ ಮಾಡುವುದು, ಬೈಯುವುದು, ಆತನ ಪತ್ನಿ, ಪ್ರಿಯತಮೆಯನ್ನು ಟ್ರೋಲ್ ಮಾಡುವುದೂ ಹೊಸದಲ್ಲ. ಆದರೆ ಈಗೊಂದು ಅಸಹ್ಯದ ಘಟನೆ ನಡೆದಿದೆ..
ಪ್ರಸಕ್ತ ಐಪಿಎಲ್ನಲ್ಲಿ ಧೋನಿ ಪಡೆ ಅದ್ಯಾಕೋ ಹಿಂದೆ ಬಿದ್ದಿದೆ. ಅಂತೆಯೇ ಬುಧವಾರ ಅಭುದಬಿಯ ಶೇಖ್ ಜಾಯೆದ್ ಕ್ರೀಡಾಂಗಣದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ನಡೆದ ಪಂದ್ಯದಲ್ಲೂ ಚೆನ್ನೈ ಸೂಪರ್ ಕಿಂಗ್ಸ್ ಸೋತಿದೆ. ಅದಾದ ಬೆನ್ನಲ್ಲೇ ಇನ್ಸ್ಟಾಗ್ರಾಂನಲ್ಲಿ ವ್ಯಕ್ತಿಯೋರ್ವ ಧೋನಿಯ ಐದು ವರ್ಷದ ಮಗಳು ಝೀವಾಗೆ ರೇಪ್ ಬೆದರಿಕೆ ಹಾಕಿದ್ದಾನೆ.

ಮಹೇಂದ್ರ ಸಿಂಗ್ ಧೋನಿ ಯಾವ ಪಂದ್ಯವನ್ನೂ ಚೆನ್ನಾಗಿ ಆಡುತ್ತಿಲ್ಲ ಎಂಬ ಕಾರಣಕ್ಕೆ ಅವರ ಪುಟ್ಟ ಮಗಳನ್ನು ಅತ್ಯಾಚಾರ ಮಾಡುತ್ತೇನೆ ಎಂದು ವ್ಯಕ್ತಿಯೋರ್ವ ಹಾಕಿರುವ ಕಾಮೆಂಟ್ಗೆ ನೆಟ್ಟಿಗರು ಕೆಂಡ ಕಾರುತ್ತಿದ್ದಾರೆ. ಆತ ಹಾಕಿರುವ ಕಾಮೆಂಟ್ನ ಸ್ಕ್ರೀನ್ ಶಾಟ್ ಶೇರ್ ಮಾಡಿಕೊಂಡು ಹಿಗ್ಗಾಮುಗ್ಗಾ ಬೈಯುತ್ತಿದ್ದಾರೆ.
ಕ್ರಿಕೆಟ್ ಎಂದರೆ ಏಳುಬೀಳು ಸಹಜ. ಓರ್ವ ಆಟಗಾರ ಎಲ್ಲ ಸಲವೂ ಚೆನ್ನಾಗಿಯೇ ಆಡಬೇಕು ಎಂದೇನೂ ಇಲ್ಲ. ಆದರೆ ಅಷ್ಟು ಪುಟ್ಟ ಮಗುವನ್ನು ಅಶ್ಲೀಲವಾಗಿ ನಿಂದಿಸುವುದು ಎಷ್ಟು ಸರಿ ಎಂದು ಪ್ರಶ್ನಿಸುತ್ತಿದ್ದಾರೆ. ಹಾಗೇ ಆತನ ವಿರುದ್ಧ ಶೀಘ್ರವೇ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬಲವಾಗಿ ಆಗ್ರಹಿಸುತ್ತಿದ್ದಾರೆ. (ಏಜೆನ್ಸೀಸ್)