

ಬೆಂಗಳೂರು: ಭಾರತದ ಅಗ್ರ ಸಿಂಗಲ್ಸ್ ಆಟಗಾರ ಸುಮಿತ್ ನಗಾಲ್ ಬೆಂಗಳೂರು ಓಪನ್ ಎಟಿಪಿ ಚಾಲೆಂಜರ್ ಟೆನಿಸ್ ಟೂರ್ನಿಯಲ್ಲಿ ಪರಾಭವಗೊಂಡಿದ್ದಾರೆ. ಇದರೊಂದಿಗೆ ಟೂರ್ನಿಯಲ್ಲಿ ಭಾರತೀಯರ ಸವಾಲು ಅಂತ್ಯ ಕಂಡಿದೆ.
ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆ (ಕೆಎಸ್‌ಎಲ್‌ಟಿಎ) ಅಂಗಣದಲ್ಲಿ ಶನಿವಾರ ನಡೆದ ಸಿಂಗಲ್ ವಿಭಾಗದ ಸೆಮಿೈನಲ್‌ನಲ್ಲಿ ವಿಶ್ವ ನಂ. 98 ಸುಮಿತ್ ನಗಾಲ್ 6-7, 4-6 ನೇರ್ ಸೆಟ್‌ಗಳಿಂದ ಇಟಲಿಯ ಸ್ಟೆಾನೋ ನಪೊಲಿಟಾನೊ ಎದುರು ನಿರಾಸೆ ಅನುಭವಿಸಿದರು. ಮೊದಲ ಸೆಟ್‌ನ ಟೈ ಬ್ರೇಕರ್‌ನಲ್ಲಿ 7-2 ಹಿನ್ನಡೆ ಅನುಭವಿಸಿದ ನಗಾಲ್, ಟೂರ್ನಿಯ 7ನೇ ಶ್ರೇಯಾಂಕಿತ ಆಟಗಾರ ಎದುರು ಮುಗ್ಗರಿಸಿದರು. ಇದರೊಂದಿಗೆ ಕಳೆದ 2 ವಾರಗಳ ಅವರ ಅಜೇಯ ಓಟ ಅಂತ್ಯಕಂಡಿದೆ. ಭಾನುವಾರ ೈನಲ್‌ನಲ್ಲಿ ಸ್ಟೆಾನೋ ನಪೊಲಿಟಾನೊ ಕೊರೊಯಾದ ಸಿಯಾಂಗ್ ಚಾನ್ ಹಾಗ್ ವಿರುದ್ಧ ಪ್ರಶಸ್ತಿಗಾಗಿ ಹೋರಾಡಲಿದ್ದಾರೆ.