India Win ಅಭಿಷೇಕ್​​ ಶರ್ಮ ಸ್ಫೋಟಕ ಶತಕ; ಇಂಗ್ಲೆಂಡ್​ ವಿರುದ್ಧ ಬೃಹತ್​ ಅಂತರದ ಗೆಲುವು

dk (60) (1)
Published on

India thrilling win :ಮುಂಬೈನಲ್ಲಿ ಭಾನುವಾರ ಇಂಗ್ಲೆಂಡ್​ ವಿರುದ್ಧ ನಡೆದ ಟಿ-20 5ನೇ ಪಂದ್ಯದಲ್ಲಿ ಅಭಿಷೇಕ್​​ ಶರ್ಮಾ ಸಿಡಿಸಿದ ಸ್ಫೋಟಕ ಶತಕ ನೆರವಿನಿಂದ ಟೀಮ್​ ಇಂಡಿಯಾದ ರೋಚಕ ಗೆಲುವು ಕಾಣುವ ಮೂಲಕ 4-1 ಅಂತರಲ್ಲಿ ಟಿ-20 ಸರಣಿ ಕೈ ವಶ ಮಾಡಿಕೊಂಡಿತು.

ಪಂದ್ಯದಲ್ಲಿ ಅಭಿಷೇಕ್ ಅದ್ಭುತ ಪ್ರದರ್ಶನ ನೀಡಿದರು. ಕೇವಲ 54 ಎಸೆತಗಳಲ್ಲಿ 7 ಬೌಂಡರಿ 13 ಸಿಕ್ಸರ್​ ಸಿಡಿಸುವ ಮೂಲಕ ಶತಕ ಪೂರೈಸುವುದರ ಜತೆಗೆ 135 ರನ್​ ಗಳಿಸಿದರು. ಅಂತಾರಾಷ್ಟ್ರೀಯ ಟಿ-20ಯಲ್ಲಿ ಭಾರತ ಪರ ಅತಿವೇಗದ ಶತಕ ಸಿಡಿಸಿದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ಅಭಿಷೇಕ್ ಪಾತ್ರರಾಗಿದರು. 20 ಒವರ್​ಗಳಲ್ಲಿ ಭಾರತ 9 ವಿಕೆಟ್​ ನಷ್ಟಕ್ಕೆ 247 ಬೃಹತ್​ ರನ್​ಗಳನ್ನು ಪೆರಿಸಿತು.

248 ರನ್​ಗಳ ಬೃಹತ್​ ಗುರಿ ಬೆನ್ನಟ್ಟಿದ ಇಂಗ್ಲೆಂಡ್​, ಕೇವಲ 10.3 ಒವರ್​ನಲ್ಲಿ ತನ್ನ ಎಲ್ಲಾ 10 ವಿಕೆಟ್ ಕಳೆದುಕೊಳ್ಳುವ ಮೂಲಕ 97 ರನ್ ಕಲೆ​ ಹಾಕಿ ಸೋಲಾನುಭವಿಸಬೇಕಾಯಿತು. ಭಾರತ 150 ರನ್​ಗಳ ಗೆಲುವಿನ ನಗೆ ಬಿರಿತು. ​(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net