

ಮೆಲ್ಬೋರ್ನ್: ಭಾರತದ ಅಗ್ರ ಟೆನಿಸ್ ಸಿಂಗಲ್ಸ್ ಆಟಗಾರ ಸುಮಿತ ನಗಾಲ್ ಭಾನುವಾರ ಆರಂಭವಾಗಲಿರುವ ವರ್ಷದ ಮೊದಲ ಗ್ರಾಂಡ್ ಸ್ಲಾಂ ಟೂರ್ನಿ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ಪ್ರಧಾನ ಸುತ್ತಿಗೇರಿದ್ದಾರೆ. 2021ರಲ್ಲಿ ಕೊನೆಯದಾಗಿ ಗ್ರಾಂಡ್ ಸ್ಲಾಂನ ಪ್ರಮುಖ ಸುತ್ತಿಗೆ ಅರ್ಹತೆ ಪಡೆದಿದ್ದ ನಗಾಲ್, ಮೂರು ವರ್ಷಗಳ ಬಳಿಕ 2ನೇ ಬಾರಿಗೆ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದಾರೆ.
ಶುಕ್ರವಾರ ನಡೆದ ಕ್ವಾಲಿಫೈಯರ್ ಸುತ್ತಿನ ಫೈನಲ್ ಪಂದ್ಯದಲ್ಲಿ ವಿಶ್ವ ನಂ.139 ಸುಮಿತ್ 6-4, 6-4 ನೇರ ಸೆಟ್‌ಗಳಿಂದ ಸ್ಲೋವಾಕಿಯಾದ ಅಲೆಕ್ಸ್ ಮೊಲ್ಕನಿಗೆ ಶಾಕ್ ನೀಡಿದರು. ಕ್ವಾಲಿೈಯರ್‌ನಲ್ಲಿ ಒಂದೂ ಸೆಟ್ ಹಿನ್ನಡೆ ಕಾಣದ ಸುಮಿತ್, ಆರಂಭಿಕ ಸುತ್ತಿನಲ್ಲಿ ವಿಶ್ವ ನಂ.31 ಅಲೆಕ್ಸಾಂಡರ್ ಬುಬ್ಲಿಕ್ ವಿರುದ್ಧ ಸೆಣಸಲಿದ್ದಾರೆ. 2019, 2020ರ ಯುಎಸ್ ಓಪನ್‌ನ ಪ್ರದಾನ ಸುತ್ತಿಗೆ ಅರ್ಹತೆಗಳಿಸಿದ್ದರು. 2019ರಲ್ಲಿ ಟೆನಿಸ್ ದಿಗ್ಗಜ ರೋಜರ್ ೆಡರೆರ್ ಎದುರು 6-4,1-6, 2-6, 4-6 ರಿಂದ ಸೋಲು ಕಂಡಿದ್ದರು.