ಭಾರತ-ಶ್ರೀಲಂಕಾ ಕ್ರಿಕೆಟ್​ ಸರಣಿಯ ವೇಳಾಪಟ್ಟಿಯಲ್ಲಿ ಕಿರು ತಿದ್ದುಪಡಿ

web ind vs sl
Published on

ಮುಂಬೈ: ಭಾರತ ತಂಡದ ಮುಂಬರುವ ಶ್ರೀಲಂಕಾ ಪ್ರವಾಸ ಒಂದು ದಿನದ ಮಟ್ಟಿಗೆ ಮುಂದೂಡಲ್ಪಟ್ಟಿದೆ. ವೇಳಾಪಟ್ಟಿಯಲ್ಲಿ ಸಣ್ಣ ತಿದ್ದುಪಡಿಯನ್ನು ಮಾಡಲಾಗಿದ್ದು, ಜುಲೈ 26ಕ್ಕೆ ಬದಲಾಗಿ 27ರಿಂದ ಪ್ರವಾಸ ಶುರುವಾಗಲಿದೆ.

ಪ್ರವಾಸದ ಮೊದಲ 3 ಟಿ20 ಪಂದ್ಯಗಳು ಜುಲೈ 27, 28 ಮತ್ತು 30ರಂದು ಪಲ್ಲೆಕಿಲೆಯಲ್ಲಿ ನಡೆಯಲಿವೆ. 2 ದಿನಗಳ ಹಿಂದಷ್ಟೇ ಪ್ರಕಟಗೊಂಡಿದ್ದ ವೇಳಾಪಟ್ಟಿಯಲ್ಲಿ ಈ 3 ಪಂದ್ಯಗಳು ಜುಲೈ 26, 27, 29ಕ್ಕೆ ನಿಗದಿಯಾಗಿದ್ದವು. ಏಕದಿನ ಸರಣಿ ಕೂಡ ಒಂದು ದಿನ ತಡವಾಗಿ ಶುರುವಾಗಲಿದ್ದು, ಆಗಸ್ಟ್​ 1ಕ್ಕೆ ಬದಲಾಗಿ 2ರಿಂದ ಕೊಲಂಬೊದಲ್ಲಿ ನಡೆಯಲಿದೆ. ನಂತರದ 2 ಪಂದ್ಯಗಳು ಹಿಂದಿನಂತೆ ಆಗಸ್ಟ್​ 4 ಮತ್ತು 7ಕ್ಕೆ ನಿಗದಿಯಾಗಿವೆ.

2021ರ ಬಳಿಕ ಭಾರತ ಮೊದಲ ಬಾರಿಗೆ ಶ್ರೀಲಂಕಾದಲ್ಲಿ ದ್ವಿಪಕ್ಷೀಯ ಸರಣಿ ಆಡಲಿದೆ. ಉಭಯ ತಂಡಗಳು ಹೊಸ ಕೋಚ್​ (ಗೌತಮ್​ ಗಂಭೀರ್​, ಸನತ್​ ಜಯಸೂರ್ಯ) ಮಾರ್ಗದರ್ಶನದಲ್ಲಿ ಕಣಕ್ಕಿಳಿಯಲಿರುವುದು ವಿಶೇಷವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net