

ಮುಂಬೈ: ವೇಗಿಗಳಾದ ಧವಳ್ ಕುಲಕರ್ಣಿ (21ಕ್ಕೆ 3) ಮತ್ತು ಕನ್ನಡಿಗ ಅಭಿಮನ್ಯು ಮಿಥುನ್ (27ಕ್ಕೆ 2) ಬಿಗಿ ಬೌಲಿಂಗ್ ಮತ್ತು ಗುರುಕೀರತ್ ಸಿಂಗ್ ಮಾನ್ (63*ರನ್, 35 ಎಸೆತ, 10 ಬೌಂಡರಿ, 1 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ಬಲದಿಂದ ಭಾರತ ತಂಡ ಮಾಜಿ ಕ್ರಿಕೆಟಿಗರ ಇಂಟರ್ನ್ಯಾಷನಲ್ ಮಾಸ್ಟರ್ಸ್ ಲೀಗ್ (ಐಎಂಎಲ್) ಟಿ20 ಟೂರ್ನಿಯಲ್ಲಿ ಸತತ 2ನೇ ಗೆಲುವು ದಾಖಲಿಸಿದೆ. ನವಿ ಮುಂಬೈನ ಡಾ. ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್ ಎದುರು 9 ವಿಕೆಟ್ಗಳಿಂದ ಜಯ ಸಾಧಿಸಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಇಂಗ್ಲೆಂಡ್ ತಂಡ ಪ್ರಮುಖ ಬ್ಯಾಟರ್ಗಳ ವೈಫಲ್ಯದ ನಡುವೆ 8 ವಿಕೆಟ್ಗೆ 132 ರನ್ ಪೇರಿಸಿತು. ಪ್ರತಿಯಾಗಿ ಭಾರತ 11.4 ಓವರ್ಗಳಲ್ಲೇ 1 ವಿಕೆಟ್ 133 ರನ್ ಗಳಿಸಿ ಜಯಿಸಿತು. ಗುರುಕೀರತ್ ಮತ್ತು ನಾಯಕ ಸಚಿನ್ ತೆಂಡುಲ್ಕರ್ (34) ಮೊದಲ ವಿಕೆಟ್ಗೆ 75 ರನ್ ಸೇರಿಸಿ ಭದ್ರ ಬುನಾದಿ ಹಾಕಿಕೊಟ್ಟರು. ನಂತರ ಯುವರಾಜ್ ಸಿಂಗ್ (27*) ಜತೆಗೂಡಿ ಗುರುಕೀರತ್ ಗೆಲುವಿನ ದಡ ಸೇರಿಸಿದರು.
ಇಂಗ್ಲೆಂಡ್ ಮಾಸ್ಟರ್ಸ್: 8 ವಿಕೆಟ್ಗೆ 132 (ಮಾರ್ಗನ್ 14, ಟಿಮ್ ಆಂಬ್ರೋಸ್ 23, ಮ್ಯಾಡಿ 25, ಬ್ರೆಸ್ನನ್ 16, ಸ್ಕೋಫಿಲ್ಡ್ 18, ಟ್ರೆಮ್ಲೆಟ್ 16, ಧವಳ್ ಕುಲಕರ್ಣಿ 21ಕ್ಕೆ 3, ಮಿಥುನ್ 27ಕ್ಕೆ 2, ಪವನ್ ನೇಗಿ 16ಕ್ಕೆ 2, ವಿನಯ್ಕುಮಾರ್ 27ಕ್ಕೆ 1). ಇಂಡಿಯಾ ಮಾಸ್ಟರ್ಸ್: 11.4 ಓವರ್ಗಳಲ್ಲಿ 1 ವಿಕೆಟ್ಗೆ 133 (ಗುರುಕೀರತ್ 63*, ತೆಂಡುಲ್ಕರ್ 34, ಯುವರಾಜ್ 28*, ಸ್ಕೋಫಿಲ್ಡ್ 33ಕ್ಕೆ 1).