ಒಡಿಶಾ ಮಾಸ್ಟರ್ಸ್‌ ಸೂಪರ್-100 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ರಾಜ್ಯದ ಆಯುಷ್,ಅಶ್ವಿನಿ ರನ್ನರ್ ಅಪ್

New-Project-22
Published on

ಬೆಂಗಳೂರು: ವಿಶ್ವ ಜೂನಿಯರ್ ಚಾಂಪಿಯನ್‌ಷಿಪ್ ಕಂಚು ವಿಜೇತ ಕರ್ನಾಟಕದ ಯುವ ಷಟ್ಲರ್ ಆಯುಷ್ ಶೆಟ್ಟಿ, ಮಹಿಳಾ ಡಬಲ್ಸ್ ಆಟಗಾರ್ತಿ ಅಶ್ವಿನಿ ಪೊನ್ನಪ್ಪ, ಪುರುಷರ ಡಬಲ್ಸ್‌ನಲ್ಲಿ ಸಾಯಿ ಪ್ರತೀಕ್ ಕಟಕ್‌ನಲ್ಲಿ ನಡೆದ ಒಡಿಶಾ ಮಾಸ್ಟರ್ಸ್‌ ಸೂಪರ್-100 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ರನ್ನರ್ ಅಪ್ ಆಗಿದ್ದಾರೆ.

ಭಾನುವಾರ ನಡೆದ ಪುರುಷರ ಸಿಂಗಲ್ಸ್ ೈನಲ್‌ನಲ್ಲಿ 18 ವರ್ಷದ ಆಯುಷ್ ಶೆಟ್ಟಿ 18-21,21-19,14-21 ರಿಂದ ದೇಶಬಾಂಧವ ಸತೀಶ್ ಕುಮಾರ್ ಕರುಣಾಕರನ್ ವಿರುದ್ಧ ಪರಾಭವಗೊಂಡರು. ಪುರುಷರ ಡಬಲ್ಸ್‌ನಲ್ಲಿ ಉದಯೋನ್ಮುಖ ಜೋಡಿ ಸಾಯಿ ಪ್ರತೀಕ್- ಕೃಷ್ಣ ಪ್ರಸಾದ್ ರನ್ನರ್ ಅಪ್‌ಗೆ ತೃಪ್ತಿಪಟ್ಟರು.

ಮಹಿಳಾ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ- ತನಿಶಾ ಕ್ರಾಸ್ಟೋ ಜೋಡಿ 14-21,17-21ರಿಂದ ಇಂಡೋನೇಷ್ಯಾದ ಮೈಲಿಸಾ ಟ್ರಯಾಸ್-ರಾಚೆಲ್ ಅಲೆಸ್ಸಿಯಾ ಜೋಡಿ ಎದುರು ನಿರಾಸೆ ಅನುಭವಿಸಿತು. ಇದರೊಂದಿಗೆ ಕಳೆದ 3 ವಾರಗಳಲ್ಲಿ ಭಾರತೀಯ ಜೋಡಿ 2ನೇ ಬಾರಿಗೆ ರನ್ನರ್ ಅಪ್ ಸ್ಥಾನ ಪಡೆದಿದೆ. ಸಯ್ಯದ್ ಮೋದಿ ಸೂಪರ್-300 ಬ್ಯಾಡ್ಮಿಂಟನ್ ಟೂರ್ನಿಯಲ್ಲೂ ರನ್ನರ್ ಅಪ್ ಆಗಿತ್ತು. ಮಿಶ್ರ ಡಬಲ್ಸ್‌ನಲ್ಲಿ ಧ್ರುವ ಕಪಿಲ-ತನಿಶಾ ಕ್ರಾಸ್ಟೋ ಜೋಡಿ ಚಾಂಪಿಯನ್ ಆಗಿ ಹೊರಹೊಮ್ಮಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net