ಸೆಮಿಫೈನಲ್‌ನಲ್ಲಿ ಸೋತ ಕರ್ನಾಟಕ: ಭಾರತ ಹಾಕಿ ತಂಡದ ನಾಯಕ ಹರ್ಮಾನ್‌ಪ್ರೀತ್ ಸಿಂಗ್ ಅವಳಿ ಗೋಲು

New-Project-5-2
Published on

ಚೆನ್ನೈ: ಪುರುಷರ 13ನೇ ರಾಷ್ಟ್ರೀಯ ಚಾಂಪಿಯನ್‌ಷಿಪ್ ಹಾಕಿ ಟೂರ್ನಿಯ ಸೆಮಿೈನಲ್‌ನಲ್ಲಿ ಕರ್ನಾಟಕ ತಂಡ ಪರಾಭವಗೊಂಡಿದೆ. ಭಾರತ ಹಾಕಿ ತಂಡದ ನಾಯಕ ಹರ್ಮಾನ್‌ಪ್ರೀತ್ ಸಿಂಗ್ (39, 44ನೇ ನಿಮಿಷ) ಸಿಡಿಸಿದ ಅವಳಿ ಗೋಲುಗಳ ನೆರವಿನಿಂದ ಪಂಜಾಬ್ ತಂಡ 5-1 ಗೋಲುಗಳ ಅಂತರದಿಂದ ಕರ್ನಾಟಕ ಎದುರು ಗೆದ್ದು ಬೀಗಿದೆ. ಸೋಮವಾರ ನಡೆದ ಪಂದ್ಯದಲ್ಲಿ ಕರ್ನಾಟಕ ಪರ ಬಿ. ಆಭರಣ್ ಸುದೇವ್ (18) ಏಕೈಕ ಗೋಲು ಸಿಡಿಸಿದರು. ಪಂಜಾಬ್ ಪರ ಶಂಶೀರ್ ಸಿಂಗ್ (4), ಸುಖ್‌ಜೀತ್ ಸಿಂಗ್ (13) ಹಾಗೂ ಆಕಾಶ್‌ದೀಪ್ ಸಿಂಗ್ (45) ಇತರ ಗೋಲು ದಾಖಲಿಸಿದರು. ೈನಲ್‌ನಲ್ಲಿ ಪಂಜಾಬ್ ತಂಡ ಪ್ರಶಸ್ತಿಗಾಗಿ ಹರಿಯಾಣ ಎದುರು ಕಾದಾಡಲಿದೆ. ಆತಿಥೇಯ ತಮಿಳುನಾಡು ಶೂಟೌಟ್‌ನಲ್ಲಿ 2-4ರಿಂದ ಮೊದಲ ಸೆಮೀಸ್‌ನಲ್ಲಿ ಹರಿಯಾಣ ಎದುರು ಮುಗ್ಗರಿಸಿತು. ಇದಕ್ಕೂ ಮುನ್ನ ಉಭಯ ತಂಡಗಳು 1-1ರಿಂದ ಸಮಬಲ ಸಾಧಿಸಿದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net