

ಪ್ಯಾರಿಸ್: ವಿಶ್ವ ಚಾಂಪಿಯನ್ ಪ್ಯಾರಾ ಓಟಗಾರ್ತಿ ದೀಪ್ತಿ ಜೀವಾಂಜಿ ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಕಂಚಿನ ಪದಕ ಗೆದ್ದುಕೊಟ್ಟಿದ್ದಾರೆ. ಇದರೊಂದಿಗೆ ಸೋಮವಾರ 2 ಚಿನ್ನ ಸೇರಿ ಒಟ್ಟು 8 ಪದಕಗಳನ್ನು ಜಯಿಸಿದ್ದ ಭಾರತದ ಕ್ರೀಡಾಪಟುಗಳು ಕ್ರೀಡಾಸ್ಪರ್ಧೆಯ ಆರನೇ ದಿನವಾದ ಮಂಗಳವಾರ ಏಕೈಕ ಪದಕ ಜಯಿಸಿದಂತಾಗಿದೆ.
ಮಹಿಳಾ ಪ್ಯಾರಾ ಶೂಟರ್ ಅವನಿ ಲೇಖರ ಪ್ಯಾರಿಸ್‌ನಲ್ಲಿ 2ನೇ ಪದಕ ಜಯಿಸುವ ಕನಸು ಭಗ್ನಗೊಂಡರೆ, ಮಹಿಳೆಯರ ವೈಯಕ್ತಿಕ ರಿಕರ್ವ್ ಆರ್ಚರಿ ಸ್ಪರ್ಧೆಯಲ್ಲಿ ಪೂಜಾ ಜತ್ಯಾನ್ ಕ್ವಾರ್ಟರ್‌ೈನಲ್‌ನಲ್ಲಿ ನಿರಾಸೆ ಎದುರಿಸಿದರು. ಉದ್ಘಾಟನಾ ಸಮಾರಂಭದಲ್ಲಿ ಭಾರತದ ಮಹಿಳಾ ಧ್ವಜಧಾರಿಯಾಗಿದ್ದ ಶಾಟ್‌ಪುಟ್‌ಪಟು ಭಾಗ್ಯಶ್ರೀ ಜಾಧವ್ ಸಹ ಪೋಡಿಯಂ ಏರಲು ವಿಲರಾದರು. ಇದರೊಂದಿಗೆ ಭಾರತ 3 ಚಿನ್ನ, 5 ಬೆಳ್ಳಿ, 8 ಕಂಚು ಸಹಿತ ಒಟ್ಟು 18 ಪದಕ ಗೆದ್ದುಕೊಂಡಂತಾಗಿದೆ. ಪುರುಷರ ಹೈಜಂಪ್‌ನಲ್ಲಿ ತಂಗವೇಲು ಮರಿಯಪ್ಪನ್, ಜಾವೆಲಿನ್ ಎಸೆತಗಾರ ಸುಂದರ್ ಸಿಂಗ್ ಗುರ್ಜರ್ ಮೇಲೆ ಪದಕ ನಿರೀಕ್ಷೆ ಇಡಲಾಗಿದ್ದು, ಕಳೆದ ಆವೃತ್ತಿಯ ಪದಕ ಸಂಖ್ಯೆ ಹಿಮ್ಮೆಟ್ಟಿಸುವ ನಿರೀಕ್ಷೆ ಹರಡಿದೆ.
ದೀಪ್ತಿ ಕಂಚಿನ ಓಟ: ಪ್ಯಾರಾಲಿಂಪಿಕ್ಸ್ ಮಹಿಳೆಯರ ಟಿ20- 400 ಮೀಟರ್ ಸ್ಪರ್ಧೆಯ ೈನಲ್‌ನಲ್ಲಿ ಪ್ಯಾರಾ ಓಟಗಾರ್ತಿ ದೀಪ್ತಿ ಜೀವಾಂಜಿ 55.82 ಸೆಕೆಂಡ್‌ಗಳಲ್ಲಿ ಮೂರನೇ ಸ್ಥಾನಿಯಾಗಿ ಗುರಿ ತಲುಪಿದರು. ಇದರೊಂದಿಗೆ ಪ್ರೀತಿ ಪಾಲ್ ಬಳಿಕ ಅಥ್ಲೆಟಿಕ್ಸ್‌ನಲ್ಲಿ ಪದಕ ಗೆದ್ದ 2ನೇ ಸಾಧಕಿ ಎನಿಸಿದರು. ಸೋಮವಾರ ರಾತ್ರಿ ನಡೆದ ಅರ್ಹತಾ ಸುತ್ತಿನ ಮೊದಲ ಹೀಟ್ಸ್‌ನಲ್ಲಿ 55.85 ಸೆಕೆಂಡ್‌ಗಳಲ್ಲಿ ಗುರಿ ತಲುಪಿದ ದೀಪ್ತಿ ಅಗ್ರಸ್ಥಾನಿಯಾಗಿ ಪದಕ ಸುತ್ತಿಗೆ ಪ್ರವೇಶ ಪಡೆದಿದ್ದರು. ಈ ವಿಭಾಗದಲ್ಲಿ ಯೂಕ್ರೇನ್‌ನ ಯುಲಿಯಾ ಶುಲಿಯಾರ್ (55.16 ಸೆ), ಟರ್ಕಿಯ ಐಸೆಲ್ ಓಂಡರ್ (55.23)ಕ್ರಮವಾಗಿ ಚಿನ್ನ ಹಾಗೂ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು. ಹೈದರಾಬಾದ್‌ನ ದಿನಗೂಲಿ ನೌಕರನ ಮಗಳಾಗಿರುವ 20 ವರ್ಷದ ದೀಪ್ತಿ, ವಿಶ್ವ ಅಥ್ಲೆಟಿಕ್ಸ್ ಪ್ಯಾರಾ ಚಾಂಪಿಯನ್‌ಷಿಪ್‌ನ 400 ಮೀಟರ್ ಓಟದಲ್ಲಿ 55.07 ಸೆಕೆಂಡ್‌ಗಳಲ್ಲಿ ಕ್ರಮಿಸಿ ವಿಶ್ವ ದಾಖಲೆಯೊಂದಿಗೆ ಸ್ವರ್ಣ ಪದಕ ಜಯಿಸಿದ್ದರು.
ಅವನಿ ಕೈತಪ್ಪಿದ 2ನೇ ಪದಕ: ಪ್ಯಾರಾಲಿಂಪಿಕ್ಸ್‌ನಲ್ಲಿ ಅವಳಿ ಸ್ವರ್ಣ ಪದಕ ಗೆದ್ದ ಮೊದಲ ಭಾರತೀಯರಾಗಿರುವ ಅವನಿ ಲೇಖರ ಪ್ಯಾರಿಸ್‌ನಲ್ಲಿ 2ನೇ ಪದಕ ಜಯಿಸುವ ಕನಸು ಭಗ್ನಗೊಂಡಿದೆ. ಮಹಿಳೆಯರ 50 ಮೀಟರ್ ರೈಲ್ 3ಪಿ ಎಸ್‌ಎಚ್1 ವಿಭಾಗದಲ್ಲಿ 5ನೇ ಸ್ಥಾನಕ್ಕೆ ತೃಪ್ತಿಪಟ್ಟ ಅವನಿ, ಟೋಕಿಯೊ ಗೇಮ್ಸ್‌ನಲ್ಲಿ ಗೆದ್ದ ಕಂಚಿನ ಪದಕ ಉಳಿಸಿಕೊಳ್ಳುವಲ್ಲಿ ವಿಲರಾದರು. ಮಂಗಳವಾರ ನಡೆದ ೈನಲ್‌ನ ಪ್ರೊನ್, ನೀಲಿಂಗ್ ಹಾಗೂ ಸ್ಟಾೃಂಡಿಂಗ್‌ನಲ್ಲಿ 22 ವರ್ಷದ ಅವನಿ ಲೇಖರ ಒಟ್ಟಾರೆಯಾಗಿ 420.6 ಅಂಕ ಕಲೆಹಾಕಿದರು.
ಮೊದಲ 10 ಸುತ್ತುಗಳಲ್ಲಿ ಅಗ್ರ 2ರಲ್ಲಿ ಸ್ಥಾನ ಪಡೆದಿದ್ದ ಅವನಿ, ನಂತರ ಕುಸಿತ ಕಂಡರು. ಶುಕ್ರವಾರ ಮಹಿಳೆಯರ 10 ಮೀಟರ್ ಏರ್ ರೈಲ್ ವಿಭಾಗದಲ್ಲಿ ಚಿನ್ನ ಜಯಿಸಿದ್ದ ಅವನಿ, ಮಿಶ್ರ ವಿಭಾಗದಲ್ಲೂ ನಿರಾಸೆ ಅನುಭವಿಸಿದ್ದರು. ಈ ವಿಭಾಗದಲ್ಲಿ ಜರ್ಮನಿಯ ನತಾಶಾ ಹಿಲ್‌ಟ್ರಾಪ್ (456.5 ಅಂಕ), ಸ್ಲೋವಾಕಿಯಾದ ವೆರೊನಿಕಾ ವಡೋವಿಕೊವಾ (456.1) ಹಾಗೂ ಚೀನಾದ ಜಾಂಗ್ ಕ್ಯೂಪಿಂಗ್ (446) ಕ್ರಮವಾಗಿ ಚಿನ್ನ, ಬೆಳ್ಳಿ, ಕಂಚಿನ ಪದಕ ಜಯಿಸಿದರು. ಅರ್ಹತಾ ಸುತ್ತಿನಲ್ಲಿ ಏಳನೇ ಸ್ಥಾನ ಪಡೆದು ೈನಲ್‌ಗೇರಿದ್ದ ಅವನಿ 1157 ಅಂಕ ಕಲೆಹಾಕಿದ್ದರು. ಇನ್ನೂ ಕೂಟದಲ್ಲಿ ಭಾರತ ಪ್ಯಾರಾ ಶೂಟರ್‌ಗಳು 50 ಮೀಟರ್ ರೈಲ್ ಪ್ರೊನ್ ಎಸ್‌ಎಚ್1 ಹಾಗೂ 50 ಮೀಟರ್ ಪಿಸ್ತೂಲ್ ಎಸ್‌ಎಚ್ 1 ವಿಭಾಗದಲ್ಲಿ ಮಾತ್ರ ಪದಕಕ್ಕಾಗಿ ಹೋರಾಡಲಿದ್ದಾರೆ.