ಇಂದು ಭಾರತ-ಇಂಗ್ಲೆಂಡ್ ಎ ಮಹಿಳಾ ತಂಡಗಳ 2ನೇ ಟಿ20: ಒತ್ತಡದಲ್ಲಿ ಹರ್ಮಾನ್‌ಪ್ರೀತ್ ಬಳಗ

New-Project-5-2
Published on

ಮುಂಬೈ: ಕಳಪೆ ಫೀಲ್ಡಿಂಗ್‌ನಿಂದಾಗಿ ಆರಂಭಿಕ ಪಂದ್ಯದಲ್ಲಿ ಸೋಲು ಅನುಭವಿಸಿರುವ ಭಾರತ ಮಹಿಳಾ ತಂಡ ಸರಣಿ ನಿರ್ಣಾಯಕ ಪಂದ್ಯದಲ್ಲಿ ಪುಟಿದೇಳುವ ವಿಶ್ವಾಸದಲ್ಲಿದೆ. ಪ್ರವಾಸಿ ಇಂಗ್ಲೆಂಡ್ ಎದುರಿನ 2ನೇ ಟಿ20ಯಲ್ಲಿ ಶನಿವಾರ ಕಣಕ್ಕಿಳಿಯಲಿದ್ದು, 3 ಪಂದ್ಯಗಳ ಸರಣಿ ಜೀವಂತವಿರಿಸಲು ಹರ್ಮಾನ್‌ಪ್ರೀತ್ ಕೌರ್ ಬಳಗ ಗೆಲ್ಲಲೇಬೇಕಾದ ಒತ್ತಡದಲ್ಲಿದೆ.

ಮೊದಲ ಪಂದ್ಯದಲ್ಲಿ ಆರಂಭಿಕ ಮೇಲುಗೈ ಸಾಧಿಸಿದರೂ ಬಳಿಕ ಪಂದ್ಯದ ಮೇಲೆ ನಿಯಂತ್ರಣ ಕಳೆದುಕೊಂಡ ಭಾರತ ಬೌಲಿಂಗ್ ಹಾಗೂ ಫೀಲ್ಡಿಂಗ್ ವಿಭಾಗದಲ್ಲಿ ನೀರಸ ನಿರ್ವಹಣೆ ತೋರಿತು. 2006 ಬಳಿಕ ಇಂಗ್ಲೆಂಡ್ ವಿರುದ್ಧ ಟಿ20 ಸರಣಿ ಜಯಿಸುವಲ್ಲಿ ವಿಲವಾಗಿರುವ ಭಾರತ ಕಂಬ್ಯಾಕ್ ಮಾಡುವ ನೀರಿಕ್ಷೆಯಲ್ಲಿದೆ.ಕರ್ನಾಟಕದ ಶ್ರೇಯಾಂಕಾ ಪಾಟೀಲ್ ಚೊಚ್ಚಲ ಪಂದ್ಯದಲ್ಲಿ 2 ವಿಕೆಟ್ ಕಬಳಿಸಿ ಗಮನಸೆಳೆದಿದದ್ದು ಮತ್ತೊಂದು ಅವಕಾಶ ಪಡೆಯುವ ಸಾಧ್ಯತೆಗಳಿವೆ.

ಪಂದ್ಯ ಆರಂಭ: ರಾತ್ರಿ 7

ನೇರಪ್ರಸಾರ: ಸ್ಪೋರ್ಟ್ಸ್ 18, ಜಿಯೋ ಸಿನಿಮಾ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net