ಮಹಿಳಾ ಕಬಡ್ಡಿ ವಿಶ್ವಕಪ್​: ಭಾರತಕ್ಕೆ ಸತತ 2ನೇ ಜಯ

ಮಹಿಳಾ ಕಬಡ್ಡಿ ವಿಶ್ವಕಪ್​: ಭಾರತಕ್ಕೆ ಸತತ 2ನೇ ಜಯ
ಮಹಿಳಾ ಕಬಡ್ಡಿ ವಿಶ್ವಕಪ್​: ಭಾರತಕ್ಕೆ ಸತತ 2ನೇ ಜಯ
Published on
ಬೆಂಗಳೂರು: ಭಾರತ ತಂಡ ಮಹಿಳೆಯರ ಕಬಡ್ಡಿ ವಿಶ್ವಕಪ್​ ಟೂರ್ನಿಯಲ್ಲಿ ಸತತ 2ನೇ ಗೆಲುವು ದಾಖಲಿಸಿದೆ. ಢಾಕಾದಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಬುಧವಾರ ನಡೆದ ತನ್ನ 2ನೇ ಲೀಗ್​ ಪಂದ್ಯದಲ್ಲಿ ಭಾರತ ತಂಡ ಆತಿಥೇಯ ಬಾಂಗ್ಲಾದೇಶ ವಿರುದ್ಧ 43-18 ಅಂಕಗಳಿಂದ ಜಯ ಸಾಧಿಸಿತು.

ಸತತ 2ನೇ ಜಯದೊಂದಿಗೆ ಭಾರತ ತಂಡ ಎ ಗುಂಪಿನ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದೆ. ಭಾರತ ಇನ್ನು ಗುರುವಾರ ನಡೆಯಲಿರುವ ತನ್ನ 3ನೇ ಪಂದ್ಯದಲ್ಲಿ ಜರ್ಮನಿ ತಂಡವನ್ನು ಎದುರಿಸಲಿದೆ. ಬಳಿಕ ಶುಕ್ರವಾರ ಕೊನೇ ಲೀಗ್​ ಪಂದ್ಯದಲ್ಲಿ ಉಗಾಂಡ ವಿರುದ್ಧ ಆಡಲಿದೆ. ಭಾರತ ಮೊದಲ ಪಂದ್ಯದಲ್ಲಿ ಥಾಯ್ಲೆಂಡ್​ ಎದುರು ಜಯ ಸಾಧಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net