

ಆಕ್ಲೆಂಡ್: ನಾಯಕಿ ರಾಣಿ ರಾಂಪಾಲ್ ಸಿಡಿಸಿದ ಅವಳಿ ಗೋಲುಗಳ ನೆರವಿನಿಂದ ಭಾರತ ಮಹಿಳಾ ಹಾಕಿ ತಂಡ ನ್ಯೂಜಿಲೆಂಡ್ ಪ್ರವಾಸ ಮೊದಲ ಪಂದ್ಯದಲ್ಲೇ ಭರ್ಜರಿ ಗೆಲುವು ದಾಖಲಿಸಿದೆ.
ಒಲಿಂಪಿಕ್ ವರ್ಷದ ಮೊದಲ ವಿದೇಶಿ ಪ್ರವಾಸದಲ್ಲಿರುವ ಭಾರತ 4-0 ಗೋಲು ಗಳಿಂದ ನ್ಯೂಜಿಲೆಂಡ್ ಡೆವಲಪ್ವೆುಂಟ್ ತಂಡದ ಎದುರು ಗೆಲುವು ದಾಖಲಿಸಿತು. ರಾಣಿ ಜತೆಗೆ ಶರ್ವಿು ಹಾಗೂ ನಮಿತಾ ತಾಪೊ ತಲಾ ಒಂದು ಗೋಲು ಬಾರಿಸಿದರು. ಗುರುವಾರವಷ್ಟೇ ಆಕ್ಲೆಂಡ್ಗೆ ಬಂದಿಳಿದ ಭಾರತ ತಂಡ ಪ್ರವಾಸದ ವೇಳೆ ಆತಿಥೇಯ ನ್ಯೂಜಿಲೆಂಡ್ ಎದುರು 4 ಪಂದ್ಯ, ಬ್ರಿಟನ್ ಎದುರು ಒಂದು ಪಂದ್ಯವನ್ನಾಡಲಿದೆ. ಸೋಮವಾರ ಆತಿಥೇಯ ನ್ಯೂಜಿಲೆಂಡ್ ರಾಷ್ಟ್ರೀಯ ತಂಡದ ಎದುರು ಭಾರತ ಮೊದಲ ಪಂದ್ಯವನ್ನಾಡಲಿದೆ.