

ಟುರಿನ್ (ಟರ್ಕಿ): ಭಾರತದ ಟೆನಿಸ್ ತಾರೆ ರೋಹನ್ ಬೋಪಣ್ಣ ಎಟಿಪಿ ಫೈನಲ್ಸ್‌ನಲ್ಲಿ ಗೆಲುವು ಸಾಧಿಸುವ ಮೂಲಕ ಹೊಸ ಮೈಲಿಗಲ್ಲು ಸೃಷ್ಟಿಸಿದ್ದಾರೆ. ಬುಧವಾರ ನಡೆದ ರೌಂಡ್ ರಾಬಿನ್ ಪಂದ್ಯದಲ್ಲಿ ಕನ್ನಡಿಗ ರೋಹನ್ ಬೋಪಣ್ಣ ಹಾಗೂ ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಜೋಡಿ 6-4, 6-4ರಿಂದ ಆಸ್ಟ್ರೇಲಿಯಾದ ರಿಂಕಿ ಹಿಜಿಕಾಟಾ-ಜೇಸನ್ ಕುಬ್ಲರ್ ವಿರುದ್ಧ ಗೆಲುವು ದಾಖಲಿಸಿತು. ಇದರೊಂದಿಗೆ 43 ವರ್ಷದ ಬೋಪಣ್ಣ ಟೂರ್ನಿಯಲ್ಲಿ ಗೆಲುವು ದಾಖಲಿಸಿದ ಅತ್ಯಂತ ಹಿರಿಯ ಆಟಗಾರ ಎನಿಸಿದರು. ಕೆನಡದ ಡೇನಿಯಲ್ ನೆಸ್ಟರ್ 2014ರಲ್ಲಿ ತನ್ನ 42ನೇ ವಯಸ್ಸಿನಲ್ಲಿ ಜಯ ಗಳಿಸಿದ್ದು ಹಿಂದಿನ ಸಾಧನೆಯಾಗಿತ್ತು. ಇಂಡೋ-ಆಸೀಸ್ ಜೋಡಿ ಶುಕ್ರವಾರ ವೆಸ್ಲಿ ಕೂಲ್‌ಹೋಫ್ ಮತ್ತು ನೀಲ್ ಸ್ಕುಪ್ಸ್ಕಿ ವಿರುದ್ಧ ಸೆಣಸಲಿದ್ದು, ಪಂದ್ಯದ ಲಿತಾಂಶ ಸೆಮಿೈನಲ್ ಅರ್ಹತೆ ನಿರ್ಧರಿಸಲಿದೆ. ವರ್ಷದ ಆರಂಭದಲ್ಲಿ ಬೋಪಣ್ಣ ಇಂಡಿಯನ್ ವೇಲ್ಸ್ ಡಬಲ್ಸ್ ಪ್ರಶಸ್ತಿ ಜಯಿಸಿದ ಅತ್ಯಂತ ಹಿರಿಯ ಎನಿಸಿದ್ದರು.