ಟೋಕಿಯೋ ಒಲಿಂಪಿಕ್ಸ್: ಮೊದಲ ಸುತ್ತಿನಲ್ಲಿ ಗೆಲುವಿನ ನಗಾರಿ ಬಾರಿಸಿದ ಭಾರತದ 'ನಗಾಲ್'

new 01
Published on

ಟೋಕಿಯೋ: ಟೆನ್ನಿಸ್ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಸುಮಿತ್ ನಗಾಲ್, ಉಜ್​​ಬೇಕಿಸ್ತಾನದ ಡೆನಿಸ್ ಇಸ್ಟೋಮಿನ್​ರನ್ನ ಸೋಲಿಸುವ ಮೂಲಕ ಒಲಿಂಪಿಕ್ಸ್ ಕ್ರೀಡಾಕೂಟದ 2ನೇ ಸುತ್ತು ಪ್ರವೇಶಿಸಿದ್ದಾರೆ.

ತೀವ್ರ ಹಣಾಹಣಿಯಿಂದ ಕೂಡಿದ ಇಂದು ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ, ನಗಾಲ್ 6-4, 6-7, 6-4 ಸೆಟ್ ಅಂತರದಿಂದ ಡೆನಿಸ್​​ರನ್ನ ಪರಾಭವಗೊಳಿಸಿದ್ದಾರೆ.

ಮೊದಲ ಸೆಟ್​​ನಲ್ಲಿ ಭಾರತೀಯ ಆಟಗಾರ ನಗಾಲ್ 6-4 ಅಂಕಗಳಿಂದ ಮುನ್ನಡೆ ಸಾಧಿಸಿದ್ದರು. ಎರಡನೇ ಸೆಟ್ ​​ನಲ್ಲಿ ಉಜ್​​ಬೇಕಿಸ್ತಾನದ ಡೆನಿಸ್ ತೀವ್ರ ಪೈಪೋಟಿ ನೀಡುವ ಮೂಲಕ 6-7 ಅಂಕಗಳಿಂದ ಸಮಬಲ ಸಾಧಿಸಿದ್ದರು.

ಅಂತಿಮ ಸೆಟ್​​ನಲ್ಲಿ ಎದುರಾಳಿ ತಂಡದ ಆಟಗಾರನ ಮೇಲೆ ಸವಾರಿ ಮಾಡಿದ ಸುಮಿತ್ 6-4 ಅಂಕಗಳಿಂದ ಪಂದ್ಯವನ್ನು ಗೆಲ್ಲುವ ಮೂಲಕ ಟೆನ್ನಿಸ್ ಪುರುಷರ ಸಿಂಗಲ್ಸ್ ವಿಭಾಗದಲ್ಲಿ 2ನೇ ಸುತ್ತು ಪ್ರವೇಶಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net