

ಅಡಿಲೇಡ್: ಭಾರತ ಕ್ರಿಕೆಟ್ ಇತಿಹಾಸದಲ್ಲಿಯೇ ಹೀನಾಯ ಸೋಲಿಗೆ ಶರಣಾದ ವಿರಾಟ್ ಕೊಹ್ಲಿ ಪಡೆ ಕೆಲ ಹಿರಿಯ ಆಟಗಾರರು ಹಾಗೂ ಅಭಿಮಾನಿಗಳಿಂದ ಟ್ರೋಲ್‌ಗೆ ಒಳಗಾಗಿದೆ. ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್, ವಾಸಿಂ ಜಾಫರ್, ಪಾಕ್‌ನ ಮಾಜಿ ವೇಗಿ ಶೋಯಿಬ್ ಅಖ್ತರ್ ಸೇರಿದಂತೆ ಹಲವು ಮಂದಿ ಕೊಹ್ಲಿ ಪಡೆಯನ್ನು ಟ್ರೋಲ್ ಮಾಡಿದ್ದಾರೆ.
ಒಪಿಟಿ ಮರೆಯಲು ‘49204084041’ ಎಂದು ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ. ಭಾರತದ ಯಾವೊಬ್ಬ ಬ್ಯಾಟ್ಸ್‌ಮನ್ ಎರಡಂಕಿ ಮೊತ್ತ ವಿಲವಾದ ಹಿನ್ನೆಲೆಯಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ. ನಾನು ಬೆಳಗ್ಗೆ ಎದ್ದು ನೋಡಿದಾಗ ಭಾರತದ ಮೊತ್ತ 369 ಎಂದುಕೊಂಡೆ, ಬಳಿಕ ಕಣ್ಣುಜ್ಜಿಕೊಂಡು ನೋಡಿದಾಗ 36/9 ಎಂದು ತಿಳಿಯಿತು ಎಂದು ಎಂದು ಪಾಕಿಸ್ತಾನದ ಮಾಜಿ ವೇಗಿ ಶೋಯಿಬ್ ಅಖ್ತರ್ ಭಾರತ ತಂಡದ ಕಾಲೆಳೆದಿದ್ದಾರೆ.