ಚೊಚ್ಚಲ ಬಾರಿಗೆ ಡಾನಾ ಕಪ್​ ಎತ್ತಿಹಿಡಿದು ಇತಿಹಾಸ ಸೃಷ್ಟಿಸಿದ ಭಾರತೀಯ ಪುಟ್​ಬಾಲ್​ ಕ್ಲಬ್​ | Dana Cup

ವಿಜಯವಾಣಿ - 2025-09-23T140259.342
Published on

ದುಬೈ: ಡೆನ್ಮಾರ್ಕ್‌ ನೆಲದಲ್ಲಿ ಪ್ರತಿಷ್ಠಿತ ಡಾನಾ ಕಪ್ (Dana Cup) ಗೆದ್ದ ಮೊದಲ ಭಾರತೀಯ ಕ್ಲಬ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮಿನರ್ವಾ ಅಕಾಡೆಮಿ ಫುಟ್‌ಬಾಲ್ ಕ್ಲಬ್, ಇದೀಗ ಇತಿಹಾಸದ ಪುಟದಲ್ಲಿ ತನ್ನ ಹೆಸರನ್ನು ದಾಖಲಿಸಿದೆ.

ಪಂಜಾಬ್‌ನ ಕ್ಲಬ್ ಇಡೀ ಪಂದ್ಯಾವಳಿಯಲ್ಲಿ ಪ್ರಾಬಲ್ಯ ಸಾಧಿಸಿದ್ದಲ್ಲದೇ, ಫೈನಲ್‌ನಲ್ಲಿ ಮಾಲ್ಟಾದ ಕೆಎಫ್‌ಎಫ್ ಕ್ಲಬ್ ವಿರುದ್ಧ 15-0 ಅಂತರದಲ್ಲಿ ಭರ್ಜರಿ ಗೆಲುವು ಕಂಡಿತು. ಈ ಮೂಲಕ ತನ್ನ ಅದ್ಭುತ ಓಟವನ್ನು ಅಂತ್ಯಗೊಳಿಸಿತು. ಅಂಡರ್-14 ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವ ಮುಖೇನ ಜಯವನ್ನು ಸಂಭ್ರಮಿಸಿತು.

ಸ್ವೀಡನ್‌ನಲ್ಲಿ ನಡೆದ ಗೋಥಿಯಾ ಕಪ್‌ನಲ್ಲಿ (ಇದನ್ನು ಸಾಮಾನ್ಯವಾಗಿ ಯೂತ್ ವರ್ಲ್ಡ್ ಕಪ್ ಎಂದು ಕರೆಯಲಾಗುತ್ತದೆ) ಅದೇ ತಂಡವು ಯಶಸ್ವಿಯಾಗಿ ತನ್ನ ಪ್ರಶಸ್ತಿಯನ್ನು ಉಳಿಸಿಕೊಂಡ ಕೇವಲ ಒಂದು ವಾರದ ಬಳಿಕ ಈ ಗೆಲುವು ಸಿಕ್ಕಿರುವುದು ಸದ್ಯ ಖುಷಿಗೆ ಪಾರವೇ ಇಲ್ಲ ಎನ್ನುವಂತೆ ಮಾಡಿದೆ. ಸತತ ಎರಡು ಚಾಂಪಿಯನ್‌ಶಿಪ್‌ಗಳನ್ನು ಗೆದ್ದ ಮೊದಲ ತಂಡ ಇದಾಗಿದೆ.

ಡಾನಾ ಕಪ್ ಫೈನಲ್‌ನಲ್ಲಿ, ರಾಜ್ ಹ್ಯಾಟ್ರಿಕ್‌ನೊಂದಿಗೆ ಸ್ಕೋರಿಂಗ್‌ನಲ್ಲಿ ಮುನ್ನಡೆ ಸಾಧಿಸಿದರೆ, ರಿದಮ್, ಟೋನಿ ರಾಜೇಶ್, ಚೇತನ್ ಕೆ, ಯೋಹೆನ್ಬಾ ಮತ್ತು ಡೆನಮೋನಿ ತಲಾ ಎರಡು ಗೋಲುಗಳನ್ನು ಬಾರಿಸಿದರು. ಅಜಮ್ ಮತ್ತು ಚೇತನ್ ಟಿ ಕೂಡ ತಲಾ ಒಂದು ಗೋಲು ಗಳಿಸುವ ಮೂಲಕ ಸ್ಕೋರ್‌ಶೀಟ್‌ನಲ್ಲಿ ಸ್ಥಾನ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net