PHOTO| ಕ್ರಿಕೆಟ್ ನಿರೂಪಕಿ ಸಂಜನಾಗೆ ಬೋಲ್ಡಾದ ಬುಮ್ರಾ, ಗೋವಾದಲ್ಲಿ ಮದುವೆ

bumra wed web
Published on

ನವದೆಹಲಿ: ಟೀಮ್ ಇಂಡಿಯಾದ ಸ್ಟಾರ್ ವೇಗಿ ಜಸ್‌ಪ್ರೀತ್ ಬುಮ್ರಾ, ಕ್ರಿಕೆಟ್ ನಿರೂಪಕಿ ಸಂಜನಾ ಗಣೇಶನ್ ಕೈಹಿಡಿಯಲಿದ್ದಾರೆ ಎಂದು ಹರಡಿದ್ದ ಸುದ್ದಿಗಳಿಗೆ ಸೋಮವಾರ ಅಧಿಕೃತ ಮುದ್ರೆ ಒತ್ತಿದ್ದಾರೆ. ಸಂಜನಾ ಜತೆಗೆ ಗೋವಾದಲ್ಲಿ ನಡೆದಿರುವ ವಿವಾಹ ಸಮಾರಂಭದ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಬುಮ್ರಾ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ತಲುಪಿಸಿದ್ದಾರೆ.

27 ವರ್ಷದ ಬುಮ್ರಾ, ‘ಪ್ರೀತಿಯ ಜತೆಗೆ ನಾವಿಬ್ಬರು ಜತೆಯಾಗಿ ಹೊಸ ಪ್ರಯಾಣವನ್ನು ಆರಂಭಿಸುತ್ತಿದ್ದೇವೆ. ಇಂದು ನಮ್ಮ ಬದುಕಿನ ಅತ್ಯಂತ ಸಂತೋಷದ ದಿನ. ನಮ್ಮ ಮದುವೆಯ ಈ ಸುದ್ದಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿರುವುದಕ್ಕೆ ನಮಗೆ ಖುಷಿಯಾಗುತ್ತಿದೆ. -ಜಸ್‌ಪ್ರೀತ್ ಮತ್ತು ಸಂಜನಾ’ ಎಂದು ಮದುವೆಯ ಚಿತ್ರಗಳನ್ನು ಪ್ರಕಟಿಸಿದ್ದಾರೆ. ಇದರ ಬೆನ್ನಲ್ಲೇ ಕ್ರಿಕೆಟ್ ತಾರೆಯರು, ಅಭಿಮಾನಿಗಳು ಮತ್ತು ಐಪಿಎಲ್ ತಂಡವಾದ ಮುಂಬೈ ಇಂಡಿಯನ್ಸ್‌ನಿಂದ ಶುಭಾಶಯಗಳ ಸುರಿಮಳೆಯಾಗಿದೆ.

ವಿಶಿಷ್ಟ ಬೌಲಿಂಗ್ ಶೈಲಿಯ ಮೂಲಕ ಯಶಸ್ಸು ಸಾಧಿಸಿರುವ ಬುಮ್ರಾ, ಭಾರತ ಪರ 18 ಟೆಸ್ಟ್, 67 ಏಕದಿನ ಮತ್ತು 50 ಟಿ20 ಪಂದ್ಯಗಳನ್ನು ಆಡಿದ್ದು, ಕ್ರಮವಾಗಿ 83, 108 ಮತ್ತು 59 ವಿಕೆಟ್ ಕಬಳಿಸಿದ್ದಾರೆ. ಕ್ರಿಕೆಟ್ ಕಾರ್ಯಕ್ರಮಗಳ ನಿರೂಪಕಿಯಾಗಿ ಈಗಾಗಲೆ ಸಾಕಷ್ಟು ಗಮನ ಸೆಳೆದಿರುವ ಸಂಜನಾ ಗಣೇಶನ್, ೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯಲ್ಲೂ ಭಾಗವಹಿಸಿದ್ದರು ಮತ್ತು ರೂಪದರ್ಶಿಯಾಗಿಯೂ ಮಿಂಚಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net