

ಚಿಕ್ಕಬಳ್ಳಾಪುರ: ಭಾರತ ಕ್ರಿಕೆಟ್ ತಂಡದ ಅಲ್ ರೌಂಡರ್ ವಾಷಿಂಗ್ಟನ್ ಸುಂದರ್ ನಂದಿ ಬೆಟ್ಟದಲ್ಲಿ ಸುತ್ತಾಡಿರುವ, ಅಲ್ಲಿನ ಸೊಬಗಿನ ವಾತಾವರಣಕ್ಕೆ ಮಾರು ಹೋಗಿ ಖುಷಿ ವ್ಯಕ್ತಪಡಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕರ್ನಾಟಕದ ಊಟಿ ಎಂತಲೇ ಕರೆಸಿಕೊಂಡಿರುವ ಪ್ರಾಕೃತಿಕ ರಮ್ಯತಾಣ ನಂದಿ ಬೆಟ್ಟಕ್ಕೆ ಫೀದಾ ಆಗಿರುವುದು, ಅದರಲ್ಲೂ ಕನ್ನಡದಲ್ಲಿ ಮಾತನಾಡಿರುವ ಸುಂದರ್ ಅವರ ವಿಡಿಯೋಗೆ ಅಭಿಮಾನ ಬಳಗವು ಖುಷಿ ವ್ಯಕ್ತಪಡಿಸಿದೆ.
ಕಾರಿನಲ್ಲಿ ಬಂದು ಹೋಗಿರುವ ಸುಂದರ್ ಸ್ವತಃ ಸಾಮಾಜಿಕ ಜಾಲತಾಣದಲ್ಲಿ ಪ್ರವಾಸ ಅನುಭವದ ವಿಡಿಯವನ್ನು ಹಂಚಿಕೊಂಡಿದ್ದಾರೆ. ಅದರಲ್ಲೂ ಕನ್ನಡದಲ್ಲಿ ಮುಸುಕಿನ ಜೋಳದ ವ್ಯಾಪಾರಿಯನ್ನು ಮಾತನಾಡಿಸಿರುವುದು ವಿಶೇಷ. ಅಕ್ಕ, ನೀವು ಕ್ರಿಕೆಟ್ ನೋಡುತ್ತೀರಾ? ಎಂದು ಪ್ರಶ್ನಿಸಿದ್ದಕ್ಕೆ ಮಹಿಳೆಯು, ಇಲ್ಲ ನಾನು ಕ್ರಿಕೆಟ್ ನೋಡಲ್ಲ ಎಂದೇಳಿದ್ದಾರೆ. ಬೇಯಿಸಿದ ಮುಸುಕಿನ ಜೋಳಕ್ಕೆ ಮಸಾಲ ಜಾಸ್ತಿ ಹಾಕಬೇಕಾ? ಇಲ್ಲವೇ ಕಮ್ಮಿ ಇರಬೇಕಾ? ಎಂದು ಪ್ರಶ್ನಿಸಿದ್ದು ಇದಕ್ಕೆ ಕಡಿಮೆ ಅಂತಾ ಹೇಳಿದ ಸುಂದರ್ ಪಡೆದುಕೊಂಡು ಜೋಳ ಸವಿಯುತ್ತ ರುಚಿಯ ಉದ್ಗಾರ ತೆಗೆದಿದ್ದಾರೆ. ಬಳಿಕ ನೋಡಿ ನಮ್ಮ ಬೆಂಗಳೂರು, ನಂದಿ ಬೆಟ್ಟ ಹಸಿರಿನ ವಾತಾವರಣ ಎಷ್ಟು ಚೆನ್ನಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.