

ಬ್ರಿಜ್‌ಟೌನ್: ಹಾಲಿ ವಿಶ್ವಕಪ್ ಟೂರ್ನಿ ಬಳಿಕ ಟೀಮ್ ಇಂಡಿಯಾ ಮುಖ್ಯ ಕೋಚ್ ಸ್ಥಾನದ ಜವಾಬ್ದಾರಿಯಿಂದ ಕೆಳಗಿಳಿಯಲಿರುವ ದಿಗ್ಗಜ ಬ್ಯಾಟರ್ ಹಾಗೂ ಕನ್ನಡಿಗ ರಾಹುಲ್ ದ್ರಾವಿಡ್‌ಗೆ ರೋಹಿತ್ ಶರ್ಮ ಪಡೆ ಟ್ರೋಫಿ ಜಯಿಸುವ ಮೂಲಕ ಗೆಲುವಿನ ಉಡುಗೊರೆ ನೀಡುವ ವಿಶ್ವಾಸದಲ್ಲಿದೆ. ಜತೆಗೆ ನಾಯಕ, ಆಟಗಾರನಾಗಿ ಐಸಿಸಿ ವಿಶ್ವಕಪ್ ಗೆಲ್ಲಲಾಗದ್ದನ್ನು ತರಬೇತುದಾರನಾಗಿ ಸಾಧಿಸಿದ ಇತಿಹಾಸ ಬರೆಯುವ ಅವಕಾಶವೂ ದ್ರಾವಿಡ್ ಮುಂದಿದೆ. ಒಂದು ಗೆಲುವು ಭಾರತದ ಟ್ರೋಫಿ ಬರವನ್ನು ಕೊನೆಗೊಳಿಸುವುದಲ್ಲದೆ, ದ್ರಾವಿಡ್ ಅವರ ಕೋಚಿಂಗ್ ವೃತ್ತಿಜೀವನವನ್ನು ವಿಜಯೋತ್ಸವದೊಂದಿಗೆ ಅಂತ್ಯಗೊಳಿಸಲಿದೆ.
2021ರ ನವೆಂಬರ್‌ನಲ್ಲಿ ಟೀಮ್ ಇಂಡಿಯಾ ಕೋಚ್ ಆಗಿ ನಿಯೋಜನೆಗೊಂಡ ದ್ರಾವಿಡ್ ಮಾರ್ಗದರ್ಶನದಲ್ಲಿ ಟೀಮ್ ಇಂಡಿಯಾ, ಕಳೆದ 12 ತಿಂಗಳ ಅಂತರದಲ್ಲಿ 2023ರ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್, ಏಕದಿನ ವಿಶ್ವಕಪ್ ೈನಲ್ ಬಳಿಕ ಆಡಲಿರುವ 3ನೇ ಐಸಿಸಿ ಟೂರ್ನಿಯ ೈನಲ್ ಇದಾಗಿದೆ. 2007ರಲ್ಲಿ ಕೆರಿಬಿಯನ್‌ನಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ರಾಹುಲ್ ದ್ರಾವಿಡ್ ಸಾರಥ್ಯದ ಟೀಮ್ ಇಂಡಿಯಾ ಲೀಗ್ ಹಂತದಲ್ಲಿ ನಿರ್ಗಮನ ಕಾಣುವುದರೊಂದಿಗೆ ಕ್ರಿಕೆಟ್ ಅಭಿಮಾನಿಗಳ ವಲಯದಿಂದ ಭಾರಿ ಆಕ್ರೋಶ ಎದುರಿಸಿತ್ತು. ಇದೀಗ ವೆಸ್ಟ್ ಇಂಡೀಸ್‌ನಲ್ಲಿಯೇ ದ್ರಾವಿಡ್ ಮಾರ್ಗದರ್ಶನದಲ್ಲಿ ಟೀಮ್ ಇಂಡಿಯಾ ಪ್ರಶಸ್ತಿ ಹೊಸ್ತಿಲಲ್ಲಿ ನಿಂತಿರುವುದು ವಿಶೇಷ. 2023ರ ಏಕದಿನ ವಿಶ್ವಕಪ್ ಟೂರ್ನಿಯ ಬಳಿಕ ದ್ರಾವಿಡ್ ಅವಧಿ ಮುಕ್ತಾಯಗೊಂಡಿತ್ತು. ಆದರೆ ಟೂರ್ನಿಯ ಸತತ 10 ಗೆಲುವಿನ ಭರ್ಜರಿ ಪ್ರದರ್ಶನದ ಆಧಾರದಲ್ಲಿ ತಾತ್ಕಾಲಿಕವಾಗಿ ಅವಧಿ ವಿಸ್ತರಣೆ ಮಾಡಲಾಗಿತ್ತು.