

ಮುಂಬೈ: ಐಸಿಸಿ ಟಿ20 ವಿಶ್ವಕಪ್‌ನ ನೀರಸ ನಿರ್ವಹಣೆ, ಆಸ್ಟ್ರೇಲಿಯಾ ಪ್ರವಾಸದ ಏಕದಿನ ಸರಣಿಯ ವೈಟ್‌ವಾಷ್ ಬಳಿಕ ನಾಯಕತ್ವದ ಅಗ್ನಿಪರೀಕ್ಷೆ ಎದುರಿಸುತ್ತಿರುವ ಹರ್ಮಾನ್‌ಪ್ರೀತ್ ಕೌರ್ ಸಾರಥ್ಯದಲ್ಲಿ ಭಾರತ ತಂಡ ತವರಿನಲ್ಲಿ ಮತ್ತೊಂದು ಸರಣಿಗೆ ಸಜ್ಜಾಗಿದೆ. ಡಿ.ವೈ ಪಾಟೀಲ್ ಕ್ರೀಡಾಂಗಣದಲ್ಲಿ ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ 3 ಪಂದ್ಯಗಳ ಟಿ20 ಸರಣಿ ಭಾನುವಾರ ಆರಂಭವಾಗಲಿದ್ದು, ಭಾರತ ಹೊಸ ಆರಂಭದ ನಿರೀಕ್ಷೆಯಲ್ಲಿದೆ.
ಚುಟುಕು ಸರಣಿಯಲ್ಲಿ ವಿಂಡೀಸ್ ವಿರುದ್ಧ ಉತ್ತಮ ದಾಖಲೆ ಹೊಂದಿರುವ ಭಾರತ, 2019ರ ನವೆಂಬರ್ ಬಳಿಕ ಆಡಿರುವ 8 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಈ ಅಜೇಯ ಓಟವನ್ನು ಕಾಯ್ದುಕೊಳ್ಳುವುದು ಹರ್ಮಾನ್‌ಪ್ರೀತ್‌ಗೆ ಸವಾಲೆನಿಸಿದೆ. ಟಿ20 ವಿಶ್ವಕಪ್ ಬಳಿಕ ನ್ಯೂಜಿಲೆಂಡ್ ವಿರುದ್ಧ ಸರಣಿ ಹಾಗೂ ಆಸ್ಟ್ರೇಲಿಯಾ ಪ್ರವಾಸಕ್ಕೆ ಹರ್ಮಾನ್‌ಪ್ರೀತ್ ಅವರನ್ನು ನಾಯಕಿ ಸ್ಥಾನದಲ್ಲಿ ಮುಂದುವರಿಸಿದ್ದಕ್ಕೆ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದರು.
ಆದರೆ ಫಾರ್ಮ್‌ನ ಕೊರತೆ, ಫಿಟ್ನೆಸ್ ಸಮಸ್ಯೆ ಎದುರಿಸುತ್ತಿರುವ ಆಟಗಾರ್ತಿಯರನ್ನು ಕೈಬಿಟ್ಟು ಹೊಸ ಆಟಗಾರ್ತಿಯರಿಗೆ ಆಯ್ಕೆ ಸಮಿತಿ ಅವಕಾಶ ನೀಡಿದೆ. ಹರ್ಮಾನ್‌ಪ್ರೀತ್ ಕಳಪೆ ನಿರ್ವಹಣೆ ತಂಡಕ್ಕೆ ದೊಡ್ಡ ಹಿನ್ನಡೆ ಎನಿಸಿದೆ. ಆರಂಭಿಕ ಬ್ಯಾಟುಗಾರ್ತಿ ಶೆಾಲಿ ವರ್ಮ ಅನುಪಸ್ಥಿತಿಯಲ್ಲಿ ರಿಚಾ ಘೋಷ್ ಆರಂಭಿಕರಾಗಿ ಕಣಕ್ಕಿಳಿಯುವಂತಾಗಿದೆ. ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಆಧಾರವಾಗಬಲ್ಲ ಆಟಗಾರ್ತಿಯರ ಕೊರತೆ ತಂಡಕ್ಕಿದೆ. ಅರುಂಧತಿ ರೆಡ್ಡಿ ಅವರನ್ನು ಸರಣಿಯಿಂದ ಕೈ ಬಿಡಲಾಗಿದ್ದು, ಟಿಟಾಸ್ ಸಧು, ಸೈಮಾ ಠಾಕೂರ್ ಜತೆಗೆ ರೇಣುಕಾ ಸಿಂಗ್ ಬೌಲಿಂಗ್ ವಿಭಾಗ ನಿರ್ವಹಿಸಲಿದ್ದಾರೆ. ಹಾಲಿ ವರ್ಷ ಸ್ಮತಿ ಮಂದನಾ ಭಾರತ ಪಾಲಿಗೆ ಏಕೈಕ ಭರವಸೆ ಎನಿಸಿದ್ದು, 20 ಪಂದ್ಯಗಳಲ್ಲಿ 570 ರನ್‌ಗಳಿಸಿದ್ದಾರೆ. ಹಿಂದಿನ 15ರಲ್ಲಿ 13 ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ವಿಂಡೀಸ್ ಉತ್ತಮ ಲಯದಲ್ಲಿದೆ. ಅನುಭವಿ ಆಲ್ರೌಂಡರ್ ಸ್ಟೆಾನಿ ಟೇಲರ್ ಗೈರಿನಲ್ಲಿ ಡಿಯೇಂಡ್ರಾ ಡಾಟಿನ್ ಅವಕಾಶ ಪಡೆದಿದ್ದಾರೆ. ಕಿಯಾನಾ ಜೋಸ್ೆ, ನಾಯಕಿ ಹ್ಯಾಲೆ ಮ್ಯಾಥ್ಯೂಸ್ ಬಲ ವಿಂಡೀಸ್‌ಗಿದೆ.
ಆರಂಭ: ರಾತ್ರಿ 7
ನೇರಪ್ರಸಾರ: ಸ್ಪೋರ್ಟ್ಸ್ 18
ಮುಖಾಮುಖಿ: 21
ಭಾರತ: 13
ವೆಸ್ಟ್ ಇಂಡೀಸ್: 8