ಬಿಡಬ್ಲ್ಯುಎಫ್ ವರ್ಷದ ಅತ್ಯುತ್ತಮ ಜೋಡಿ ರೇಸ್‌ನಲ್ಲಿ ಸಾತ್ವಿಕ್-ಚಿರಾಗ್ ಶೆಟ್ಟಿ

New-Project-1-1
Published on

ಬೆಂಗಳೂರು: ಏಷ್ಯಾಡ್‌ನಲ್ಲಿ ಐತಿಹಾಸಿಕ ಚಿನ್ನದ ಪದಕ ಜಯಿಸಿದ ಭಾರತದ ಅಗ್ರ ಡಬಲ್ಸ್ ಆಟಗಾರರಾದ ಸಾತ್ವಿಕ್-ಚಿರಾಗ್ ಶೆಟ್ಟಿ 2023ರ ಬಿಡಬ್ಲುೃಎ್ ವರ್ಷದ ಅತ್ಯುತ್ತಮ ಜೋಡಿ ಪ್ರಶಸ್ತಿಗೆ ನಾರ್ಮನಿರ್ದೇಶನಗೊಂಡಿದ್ದಾರೆ. ಏಷ್ಯಾಡ್‌ನಲ್ಲಿ ಪದಕ ಸಾಧೆನಯೊಂದಿಗೆ ಡಬಲ್ಸ್ ರ‌್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರುವ ಮೂಲಕ ಈ ಸಾಧನೆ ಮಾಡಿದ ಮೊದಲ ಭಾರತೀಯ ಜೋಡಿ ಎನಿಸಿತ್ತು. ಸಾತ್ವಿಕ್- ಚಿರಾಗ್ ಹಾಲಿ ಋತುವಿನಲ್ಲಿ ಸ್ವಿಸ್ ಓಪನ್ ಸೂಪರ್-300, ಕೊರಿಯಾ ಓಪನ್-500 ಹಾಗೂ ಇಂಡೋನೇಷ್ಯಾ ಬ್ಯಾಡ್ಮಿಂಟನ್ ಟೂರ್ನಿ ಜಯಿಸಿ ಪ್ರಸ್ತುತ ವಿಶ್ವ ರ‌್ಯಾಂಕಿಂಗ್‌ಲ್ಲಿ 5ನೇ ಸ್ಥಾನ ಪಡೆದಕೊಂಡಿದೆ.

ಪ್ಯಾರಾ ಬ್ಯಾಡ್ಮಿಂಟನ್ ವಿಭಾಗದಲ್ಲಿ ಏಷ್ಯಾಡ್‌ನಲ್ಲಿ ಚಿನ್ನ ಜಯಿಸಿದ್ದ ತುಳಸಿಮತಿ ಮುರುಗೇಶನ್ ನಾಮನಿರ್ದೇಶನಗೊಂಡಿದ್ದು ಡಿ.11 ರಂದು ವಿಜೇತರಿಗೆ ಪ್ರಶಸ್ತಿ ವಿತರಿಸಲಾಗುವುದು. ಒಟ್ಟು ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net