

ನವದೆಹಲಿ: ಇತ್ತೀಚೆಗೆ ಜಪಾನ್ನ ಐಚಿ&ನಗೋಯಾದಲ್ಲಿ ಮುಕ್ತಾಯಗೊಂಡ ಏಷ್ಯನ್ ಗೇಮ್ಸ್ನಲ್ಲಿ ಪದಕ ಗೆದ್ದ ಭಾರತೀಯ ಸೇನೆಯ ಕ್ರೀಡಾಪಟುಗಳನ್ನು ಸೋಮವಾರ ಸನ್ಮಾನಿಸಲಾಯಿತು. ಸೇನೆಯ ಕ್ರೀಡಾಪಟುಗಳು ಏಷ್ಯಾಡ್ನಲ್ಲಿ 6 ಚಿನ್ನ, 11 ಬೆಳ್ಳಿ, 10 ಕಂಚಿನ ಸಹಿತ ಒಟ್ಟು 27 ಪದಕಗಳನ್ನು ಗೆದ್ದುಕೊಂಡಿದ್ದರು.
ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಯಿಂದ ಒಟ್ಟು 92 ಕ್ರೀಡಾಪಟುಗಳು 19 ಕ್ರೀಡಾ ವಿಭಾಗಗಳಲ್ಲಿ ಸ್ಪರ್ಧಿಸಿದ್ದರು. ಭಾರತ ಗೆದ್ದ ಒಟ್ಟು 85 ಪದಕಗಳಲ್ಲಿ ಶೇ.32 ಮತ್ತು 21 ಚಿನ್ನದ ಪದಕಗಳಲ್ಲಿ ಶೇ. 28.57ರಷ್ಟು ಕೊಡುಗೆ ಭಾರತೀಯ ಸೇನೆಯದ್ದಾಗಿತ್ತು.
ನೈಬ್ ಸುಬೇದಾರ್ ಆಗಿರುವ ಶೂಟರ್ ನೀರೂ ಢಂಡಾ 2 ಚಿನ್ನ, 1 ಬೆಳ್ಳಿ ಗೆದ್ದಿದ್ದರೆ, ನೈಬ್ ಸುಬೇದಾರ್ ಆಗಿರುವ ಓಟಗಾರ ಗುಲ್ವೀರ್ 2 ಬೆಳ್ಳಿ, 1 ಕಂಚಿನ ಪದಕ ಜಯಿಸಿದ್ದರು. ರಕ್ಷಣಾ ಸಚಿವ ರಾಜ್ನಾಥ್ ಸಿಂಗ್, ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಪ್ರಲ್ಹಾದ ಜೋಶಿ, ಸೇನಾ ಮುಖ್ಯಸ್ಥ ಜನರಲ್ ಧೀರಜ್ ಸೇಠ್ ಮತ್ತು ಇತರ ಹಿರಿಯ ಸೇನಾ ಅಧಿಕಾರಿಗಳು ಸಮಾರಂಭದಲ್ಲಿ ಹಾಜರಿದ್ದರು.
*ಏಷ್ಯಾಡ್ನಲ್ಲಿ ನಾನು ಗೆದ್ದ ಎಲ್ಲ 3 ಪದಕಗಳನ್ನು ಭಾರತೀಯ ಸೇನೆಗೆ ಅರ್ಪಿಸುವೆ. ಗಡಿಯಲ್ಲಿ ನಮ್ಮ ದೇಶವನ್ನು ರಸುವ ವೇಳೆ ಹುತಾತ್ಮರಾಗಿರುವ ಯೋಧರಿಗೂ ಇದನ್ನು ಅರ್ಪಿಸುವೆ. ನನ್ನ ಮುಂದಿನ ಗುರಿ ವಿಶ್ವ ಚಾಂಪಿಯನ್ಷಿಪ್ ಮತ್ತು ಲಾಸ್ ಏಂಜಲೀಸ್ ಒಲಿಂಪಿಕ್ಸ್ ಆಗಿದೆ.
| ನೀರೂ ಢಂಡಾ, ಸೇನಾ ಶೂಟರ್