ಇಂಗ್ಲೆಂಡ್ ಎದುರು ಭಾರತ ಎ ಮಹಿಳಾ ತಂಡಕ್ಕೆ ರೋಚಕ ಗೆಲುವು ತಂದ ಆರ್‌ಸಿಬಿ ಆಲ್ರೌಂಡರ್

New-Project-2-5
Published on

ಮುಂಬೈ: ಅಂತಿಮ ಓವರ್‌ನಲ್ಲಿ 13 ರನ್ ಅಗತ್ಯವಿದ್ದಾಗ ಆಲ್ರೌಂಡರ್ ಶ್ರೇಯಾಂಕಾ ಪಾಟೀಲ್ (26ಕ್ಕೆ 2) ನಡೆಸಿದ ಬಿಗಿ ಬೌಲಿಂಗ್ ದಾಳಿಯ ನೆರವಿನಿಂದ ಭಾರತ ಎ ತಂಡ ಮಹಿಳೆಯರ ಮೊದಲ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ಎ ಎದುರು 3 ರನ್‌ಗಳಿಂದ ರೋಚಕ ಗೆಲುವು ದಾಖಲಿಸಿದೆ. ಇದರೊಂದಿಗೆ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಕಂಡಿದೆ.

ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಭಾರತ, 7 ವಿಕೆಟ್‌ಗೆ 134 ರನ್ ಕಲೆ ಹಾಕಿತು. ಪ್ರತಿಯಾಗಿ ಹೋಲಿ ಅರ್ಮಿಟೆಜ್ (52) ಅರ್ಧಶತಕ ನಡುವೆಯೂ ಇಂಗ್ಲೆಂಡ್ 8 ವಿಕೆಟ್‌ಗೆ 131 ರನ್‌ಗಳಿಷಲಷ್ಟೇ ಶಕ್ತವಾಯಿತು. ಎರಡನೇ ಟಿ20 ಪಂದ್ಯ ಶುಕ್ರವಾರ ನಡೆಯಲಿದೆ.

ಭಾರತ ಎ: 7 ವಿಕೆಟ್‌ಗೆ 134 (ವೃಂದಾ 22, ದಿಶಾ 25, ದಿವ್ಯ ಜಿ. 22, ಚಾರ್ಲಿ ಡೀನ್ 19ಕ್ಕೆ2).
ಇಂಗ್ಲೆಂಡ್ ಎ: 8 ವಿಕೆಟ್‌ಗೆ 131 (ಹೋಲಿ ಅರ್ಮಿಟೆಜ್ 52, ಸೆರೆನ್ 31, ಕ್ಷವಿ ಗೌತಮ್ 23ಕ್ಕೆ2, ಶ್ರೇಯಾಂಕಾ 26ಕ್ಕೆ2). ಪಂದ್ಯಶ್ರೇಷ್ಠ: ಶ್ರೇಯಾಂಕಾ ಪಾಟೀಲ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net