ಕಾಮನ್ವೆಲ್ತ್​ ಕಬಡ್ಡಿ ಚಾಂಪಿಯನ್​ಷಿಪ್​: ಪ್ರಶಸ್ತಿ ಸುತ್ತಿಗೆ ಭಾರತ ಲಗ್ಗೆ

ಆತಿಥೇಯ ಭಾರತದ ಪುರುಷರ ಮತ್ತು ಮಹಿಳಾ ತಂಡಗಳು ಕಾಮನ್ವೆಲ್ತ್​ ಕಬಡ್ಡಿ ಚಾಂಪಿಯನ್​ಷಿಪ್​ನಲ್ಲಿ ಪ್ರಶಸ್ತಿ ಸುತ್ತಿಗೆ ಲಗ್ಗೆ ಹಾಕಿವೆ.
kabaddi
ಭಾರತ-ಶ್ರೀಲಂಕಾ ಮಹಿಳಾ ತಂಡಗಳ ಸೆಮಿಫೈನಲ್​ ಪಂದ್ಯದ ನೋಟ.ಏಜೆನ್ಸಿ
Published on: 

ಅಹಮದಾಬಾದ್​: ಆತಿಥೇಯ ಭಾರತದ ಪುರುಷರ ಮತ್ತು ಮಹಿಳಾ ತಂಡಗಳು ಕಾಮನ್ವೆಲ್ತ್​ ಕಬಡ್ಡಿ ಚಾಂಪಿಯನ್​ಷಿಪ್​ನಲ್ಲಿ ಪ್ರಶಸ್ತಿ ಸುತ್ತಿಗೆ ಲಗ್ಗೆ ಹಾಕಿವೆ. ಭಾರತದ ಮಹಿಳಾ ತಂಡ ಶನಿವಾರ ನಡೆಯಲಿರುವ ಫೈನಲ್​ ಪಂದ್ಯದಲ್ಲಿ ಉಗಾಂಡ ವಿರುದ್ಧ ಸೆಣಸಲಿದ್ದರೆ, ಪುರುಷರ ತಂಡ ಶ್ರೀಲಂಕಾ ಅಥವಾ ಕೀನ್ಯಾ ವಿರುದ್ಧ ಆಡಲಿದೆ.

ವೀರ್​ ಸಾವರ್ಕರ್​ ಸ್ಪೋರ್ಟ್ಸ್​ ಕಾಂಪ್ಲೆಕ್ಸ್​ನಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಶುಕ್ರವಾರ ನಡೆದ ಮಹಿಳಾ ವಿಭಾಗದ ಸೆಮಿಫೈನಲ್​ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 39-14 ಅಂಕಗಳಿಂದ ಗೆಲುವು ಸಾಧಿಸಿತು. ಭಾರತ ಮೊದಲಾರ್ಧದಲ್ಲಿ 24&7ರಿಂದ ಮುನ್ನಡೆ ಸಾಧಿಸಿತ್ತು. ಸಾಕ್ಷಿ ಗರಿಷ್ಠ 11 ಅಂಕ ಗಳಿಸಿ ಮಿಂಚಿದರೆ, ನಾಯಕಿ ನಿಧಿ ಶರ್ಮ 12 ರೈಡ್​ಗಳಿಂದ 10 ಅಂಕ ಗಳಿಸಿದರು. ರಿತು 4 ಅಂಕ ಗಳಿಸಿ ಡಿೆಂಡಿಂಗ್​ನಲ್ಲಿ ಗಮನಸೆಳೆದರು. ಸುಮನ್​ 3 ಅಂಕ ಗಳಿಸಿದರು. ಇನ್ನೊಂದು ಸೆಮಿೈನಲ್​ನಲ್ಲಿ ಉಗಾಂಡ ತಂಡ 23-21ರಿಂದ ಕೀನ್ಯಾ ವಿರುದ್ಧ ರೋಚಕ ಗೆಲುವು ದಾಖಲಿಸಿತು. ಭಾರತ ಲೀಗ್​ ಹಂತದಲ್ಲಿ ಉಗಾಂಡ ವಿರುದ್ಧ 41-18 ಅಂಕಗಳಿಂದ ಗೆದ್ದಿತ್ತು.

ಪುರುಷರ ವಿಭಾಗದ ಮೊದಲ ಸೆಮಿೈನಲ್​ ಪಂದ್ಯದಲ್ಲಿ ಸುರ್ಜೀತ್​ ಸಿಂಗ್​ ಸಾರಥ್ಯದ ಭಾರತ ತಂಡ ಬಾಂಗ್ಲಾದೇಶ ವಿರುದ್ಧ 56-27 ಅಂಕಗಳಿಂದ ಏಕಪಕ್ಷೀಯ ಗೆಲುವು ಸಾಧಿಸಿತು.

ಶನಿವಾರ ಫೈನಲ್​

ಮಹಿಳಾ ವಿಭಾಗ

ಭಾರತ-ಉಗಾಂಡ

ಆರಂಭ: ರಾತ್ರಿ 7.30

ಪುರುಷರ ವಿಭಾಗ

ಭಾರತ-ಲಂಕಾ/ಕೀನ್ಯಾ

ಆರಂಭ: ರಾತ್ರಿ 9.00

ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​, ಜಿಯೋ ಹಾಟ್​ಸ್ಟಾರ್​