ಭಾರತ ಮಹಿಳೆಯರಿಗೆ ದಾಖಲೆ ಜಯ: ನೂರನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ಗೆ ಮುಖಭಂಗ, ದೀಪ್ತಿ ದಾಳಿಗೆ ಆಂಗ್ಲರು ತತ್ತರ

New-Project-20
Published on

ಮುಂಬೈ: ಸರ್ವಾಂಗೀಣ ನಿರ್ವಹಣೆ ತೋರಿದ ಭಾರತ ತಂಡ ಮಹಿಳೆಯರ ಏಕೈಕ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್ ಎದುರು ವಿಶ್ವದಾಖಲೆಯ 347 ರನ್‌ಗಳಿಂದ ಭರ್ಜರಿ ಗೆಲುವು ದಾಖಲಿಸಿದೆ. ಇದರೊಂದಿಗೆ ಭಾರತ ತವರಿನಲ್ಲಿ ಇಂಗ್ಲೆಂಡ್ ಎದುರು ಮೊದಲ ಟೆಸ್ಟ್ ಗೆಲುವು ಸಾಧಿಸಿದಂತಾಗಿದೆ.

ಡಿ.ವೈ. ಪಾಟೀಲ್ ಕ್ರೀಡಾಂಗಣದಲ್ಲಿ ಶನಿವಾರ ಮುಕ್ತಾಯಗೊಂಡ ಪಂದ್ಯದ 3ನೇ ದಿನ ಗೆಲುವಿಗೆ 479 ರನ್‌ಗಳ ಕಠಿಣ ಗುರಿ ಪಡೆದ ಇಂಗ್ಲೆಂಡ್, ಆಲ್ರೌಂಡರ್ ದೀಪ್ತಿ ಶರ್ಮ (32ಕ್ಕೆ 4) ಹಾಗೂ ಪೂಜಾ ವಸಾಕರ್ (23ಕ್ಕೆ 3) ದಾಳಿಗೆ ತತ್ತರಿಸಿ ಭೋಜನಾ ವಿರಾಮಕ್ಕೆ ಮುನ್ನವೇ 27.3 ಓವರ್‌ಗಳಲ್ಲಿ 131 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ಹೀದರ್ ನೈಟ್ ಬಳಗ 100ನೇ ಟೆಸ್ಟ್ ಪಂದ್ಯದಲ್ಲಿ ಹೀನಾಯ ಸೋಲುಂಡಿತು. ಮೊದಲ ಇನಿಂಗ್ಸ್‌ನಲ್ಲಿ ಾಲೋಆನ್ ಹೇರದೆ ಶುಕ್ರವಾರ 2ನೇ ಸರದಿ ಆರಂಭಿಸಿದ್ದ ಭಾರತ, ದ್ವಿತೀಯ ಇನಿಂಗ್ಸ್‌ನಲ್ಲಿ 6 ವಿಕೆಟ್‌ಗೆ 186 ರನ್‌ಗಳಿಗೆ ಡಿಕ್ಲೇರ್ ೋಷಿಸಿತು. ದೀಪ್ತಿ ಶರ್ಮ ಪಂದ್ಯದಲ್ಲಿ ಒಟ್ಟು 9 ವಿಕೆಟ್ ಕಬಳಿಸಿದ ಸಾಧನೆ ಮಾಡಿದರು.

ಭಾರತ: 428 ಹಾಗೂ 6 ವಿಕೆಟ್‌ಗೆ 186 (ಹರ್ಮಾನ್‌ಪ್ರೀತ್ 44*, ಪೂಜಾ 17*, ಡೀನ್ 68ಕ್ಕೆ 4). ಇಂಗ್ಲೆಂಡ್: 136 ಹಾಗೂ 27.3 ಓವರ್‌ಗಳಲ್ಲಿ 131 (ಸೋಫಿಯಾ 15, ಬಿಮೌಂಟ್ 17, ಹೀದರ್ ನೈಟ್ 21, ಚಾರ್ಲಿ ಡೀನ್ 20*, ದೀಪ್ತಿ 32ಕ್ಕೆ4, ಪೂಜಾ 23ಕ್ಕೆ3, ರಾಜೇಶ್ವರಿ 20ಕ್ಕೆ 2). ಪಂದ್ಯಶ್ರೇಷ್ಠ: ದೀಪ್ತಿ ಶರ್ಮ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net