ನೂರನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ಗೆ ಮುಖಭಂಗ: ಭಾರತದ ಮುಂದಿನ ಟೆಸ್ಟ್ ಪಂದ್ಯಕ್ಕೆ ಕರ್ನಾಟಕದ ಬ್ಯಾಟರ್ ಶುಭಾ ಅನುಮಾನ

New-Project-21
Published on

ಮುಂಬೈ: ಸರ್ವಾಂಗೀಣ ನಿರ್ವಹಣೆ ತೋರಿದ ಭಾರತ ತಂಡ ಮಹಿಳೆಯರ ಏಕೈಕ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್ ಎದುರು ವಿಶ್ವದಾಖಲೆಯ 347 ರನ್‌ಗಳಿಂದ ಭರ್ಜರಿ ಗೆಲುವು ದಾಖಲಿಸಿದೆ. ಇದರೊಂದಿಗೆ ಭಾರತ ತವರಿನಲ್ಲಿ ಇಂಗ್ಲೆಂಡ್ ಎದುರು ಮೊದಲ ಟೆಸ್ಟ್ ಗೆಲುವು ಸಾಧಿಸಿದಂತಾಗಿದೆ.

ಭಾರತ ಹಾಗೂ ಪ್ರವಾಸಿ ಆಸ್ಟ್ರೇಲಿಯಾ ಮಹಿಳಾ ತಂಡಗಳ ನಡುವೆ ಡಿ. 21ರಂದು ಆರಂಭವಾಗಲಿರುವ ಏಕೈಕ ಟೆಸ್ಟ್‌ನಲ್ಲಿ ಕರ್ನಾಟಕದ ಬ್ಯಾಟರ್ ಶುಭಾ ಸತೀಶ್ ಆಡುವುದು ಅನುಮಾನವೆನಿಸಿದೆ. ಪದಾರ್ಪಣೆಯ ಟೆಸ್ಟ್ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಭರವಸೆ ಮೂಡಿಸಿರುವ ಶುಭಾ ಇಂಗ್ಲೆಂಡ್ ವಿರುದ್ಧ ಪಂದ್ಯದ 2ನೇ ದಿನದಾಟಕ್ಕೆ ಮುನ್ನ ಅಭ್ಯಾಸದ ವೇಳೆ ಎಡಗೈ ಬೆರಳಿನ ಮುರಿತಕ್ಕೆ ಒಳಗಾಗಿದ್ದಾರೆ.

ಭಾರತಕ್ಕೆ ಮುಂದಿನ ಟೆಸ್ಟ್
ಎದುರಾಳಿ: ಆಸ್ಟ್ರೇಲಿಯಾ
ಯಾವಾಗ: ಡಿ. 21-24
ಎಲ್ಲಿ: ವಾಂಖೆಡೆ, ಮುಂಬೈ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net