19 ವಯೋಮಿತಿ ಪುರುಷರ ಏಕದಿನ ವಿಶ್ವಕಪ್ ಟೂರ್ನಿ: ಭಾರತಕ್ಕೆ ಬಾಂಗ್ಲಾದೇಶ ಮೊದಲ ಎದುರಾಳಿ

New-Project-8-1
Published on

ದುಬೈ: ಶ್ರೀಲಂಕಾ ಕ್ರಿಕೆಟ್ ಮಂಡಳಿಯಲ್ಲಿ ಸರ್ಕಾರದ ಹಸ್ತಕ್ಷೇಪದಿಂದಾಗಿ ದಕ್ಷಿಣ ಆಫ್ರಿಕಾಕ್ಕೆ ಸ್ಥಳಾಂತರಗೊಂಡಿರುವ 15ನೇ ಆವೃತ್ತಿಯ 19 ವಯೋಮಿತಿ ಪುರುಷರ ಏಕದಿನ ವಿಶ್ವಕಪ್ ಟೂರ್ನಿಯ ಪರಿಷ್ಕೃತ ವೇಳಾಪಟ್ಟಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಬಿಡುಗಡೆ ಮಾಡಿದೆ.

ಜನವರಿ 19 ರಂದು ಐರ್ಲೆಂಡ್ ತಂಡ ಅಮರಿಕವನ್ನು ಎದುರಿಸುವ ಮೂಲಕ ಟೂರ್ನಿಗೆ ಚಾಲನೆ ದೊರೆಯಲಿದೆ. ಐದು ಬಾರಿಯ ಚಾಂಪಿಯನ್ ಭಾರತ, ಬಾಂಗ್ಲಾದೇಶ ತಂಡದ ಸವಾಲು ಎದುರಿಸುವ ಮೂಲಕ ಅಭಿಯಾನ ಆರಂಭಿಸಲಿದ್ದು, ‘ಎ’ ಗುಂಪಿನಲ್ಲಿ ಸ್ಥಾನ ಪಡೆದಿದೆ. ಬಾಂಗ್ಲಾದೇಶ, ಐರ್ಲೆಂಡ್ ಹಾಗೂ ಅಮೆರಿಕ ಗುಂಪಿನಲ್ಲಿರುವ ಇತರ ತಂಡಗಳು.

ಒಟ್ಟು 16 ತಂಡಗಳನ್ನು 4 ಗುಂಪುಗಳಾಗಿ ವಿಭಾಗಿಸಲಾಗಿದ್ದು, ಪ್ರತಿ ಗುಂಪಿನ ಅಗ್ರ 3 ತಂಡಗಳು ಸೂಪರ್-ಸಿಕ್ಸ್‌ಗೆ ಅರ್ಹತೆ ಪಡೆಯಲಿವೆ. ೆಬ್ರವರಿ 6, 8 ರಂದು ಸೆಮಿೈನಲ್ ಹಾಗೂ 11 ರಂದು ೈನಲ್ ಪಂದ್ಯ ನಡೆಯಲಿದೆ. ಉಪಾಂತ್ಯಕ್ಕೆ ಮೀಸಲು ದಿನ ನಿಗದಿಪಡಿಸಲಾಗಿದೆ.

ಭಾರತದ ಪಂದ್ಯಗಳು

ಯಾವಾಗ ಎದುರಾಳಿ

ಜ.20 ಬಾಂಗ್ಲಾದೇಶ

ಜ.25 ಐರ್ಲೆಂಡ್

ಜ.28 ಅಮೆರಿಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net