2029 ಮತ್ತು 2031ರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್​ಶಿಪ್​ಗೆ ಅತಿಥ್ಯವಹಿಸಲು ಭಾರತ ಬಿಡ್​ ಮಾಡಲಿದೆ: ಅಡಿಲ್ಲೆ ಸುಮರಿವಾಲಾ

dk - 2025-07-06T132939.994
Published on

ಬೆಂಗಳೂರು: 2029 ಮತ್ತು 2031ರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಗಳಿಗೆ ಭಾರತ ಬಿಡ್ ಸಲ್ಲಿಸಲಿದ್ದು, ಪ್ರದರ್ಶನದ ಎರಡು ಆವೃತ್ತಿಗಳಲ್ಲಿ ಒಂದನ್ನು ಆಯೋಜಿಸುವ ಹಕ್ಕನ್ನು ಪಡೆಯುವ ಆಶಯದೊಂದಿಗೆ ಇದ್ದೇವೆ ಎಂದು ವಿಶ್ವ ಅಥ್ಲೆಟಿಕ್ಸ್‌ನ ಉಪಾಧ್ಯಕ್ಷ ಮತ್ತು ಭಾರತೀಯ ಅಥ್ಲೆಟಿಕ್ಸ್ ಫೆಡರೇಶನ್ (ಎಎಫ್‌ಐ) ಮಾಜಿ ಅಧ್ಯಕ್ಷೆ ಅಡಿಲ್ಲೆ ಸುಮರಿವಾಲಾ ಭಾನುವಾರ ಪಿಟಿಐಗೆ ತಿಳಿಸಿದ್ದಾರೆ.

ಕ್ರೀಡೆಯ ಆಡಳಿತ ಮಂಡಳಿಯಾದ ವಿಶ್ವ ಅಥ್ಲೆಟಿಕ್ಸ್, 2029 ಮತ್ತು 2031 ರ ಆವೃತ್ತಿಗಳ ಆತಿಥೇಯರನ್ನು ಸೆಪ್ಟೆಂಬರ್ 2026 ರಲ್ಲಿ ಘೋಷಿಸುತ್ತದೆ. ಸದಸ್ಯ ರಾಷ್ಟ್ರಗಳು ಆಸಕ್ತಿ ವ್ಯಕ್ತಪಡಿಸಲು 2025ರ ಅ.1 ಕೊನೆಯ ದಿನವಾಗಿದೆ. ಈ ಹಿನ್ನೆಲೆ "ನಾವು 2029 ಮತ್ತು 2031 (ಚಾಂಪಿಯನ್‌ಶಿಪ್) ಗಳಿಗೆ ಕಾರ್ಯತಂತ್ರದ ಬಿಡ್ಡಿಂಗ್ ಮಾಡಲಿದ್ದೇವೆ. ಎರಡೂ ಆವೃತ್ತಿಗಳನ್ನು ಒಟ್ಟಿಗೆ ನೀಡಲಾಗುವುದು ಮತ್ತು ನಾವು ಯಾವ ಆವೃತ್ತಿಯನ್ನು ಪಡೆದರೂ ಪರವಾಗಿಲ್ಲ" ಎಂದು ಸುಮರಿವಾಲಾ ತಿಳಿಸಿದರು.

ವಿಶ್ವ ಚಾಪಿಂಯನ್​ಶಿಪ್​​ಗಳಿಗೆ ಆರಂಭಿಕ ಅರ್ಜಿ ಸಲ್ಲಿಕೆಗೆ 2026 ಏ.1ರಂದು ಕೊನೆಯ ದಿನಾಂಕವಾಗಿದೆ. ಈ ಹಿನ್ನೆಲೆ ಆಸಕ್ತ ರಾಷ್ಟ್ರಗಳು 2026 ಅ.5ರೊಳಗೆ ಅಂತಿಮ ಬಿಡ್​ಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಆಗ, ವಿಶ್ವ ಅಥ್ಲೇಟಿಕ್ಸ್​ ಕೌನ್ಸಿಲ್​ 2029 ಮತ್ತು 2031ರ ವಿಶ್ವಚಾಂಪಿಯನ್​ಶಿಪ್​ ಅತಿಥೇಯ ನಗರವನ್ನು ಘೋಷಿಸಲಿದೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net