

ನವದೆಹಲಿ: ಮುಂದಿನ ವರ್ಷದ ನಡೆಯಲಿರುವ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ದಣ ಆಫ್ರಿಕಾದ ಜೊಹಾನ್ಸ್ರ್ಬಗ್ನ ವಾಂಡರರ್ಸ್ ಮೈದಾನದಲ್ಲಿ ಅಕ್ಟೋಬರ್ 10ರಂದು ನಡೆಯಲಿರುವ ಭಾರತ-ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯವನ್ನು ವೀಸಲು 34 ಸಾವಿರ ಪ್ರೇಕ್ಷಕರಿಗೆ ಅವಕಾಶವಿದೆ. ಆದರೆ ಈ ಪಂದ್ಯದ ಟಿಕೆಟ್ಗಳಿಗಾಗಿ ಈಗ ಐಸಿಸಿಗೆ ಬರೋಬ್ಬರಿ 84 ಲಕ್ಷ ಅರ್ಜಿಗಳು ಬಂದಿವೆ!
ಪಂದ್ಯದ ಟಿಕೆಟ್ಗಳಿಗಾಗಿ 193 ದೇಶಗಳಿಂದ ಅರ್ಜಿಗಳು ಬಂದಿವೆ ಎಂದು ಐಸಿಸಿ ತಿಳಿಸಿದೆ. 2027ರ ಏಕದಿನ ವಿಶ್ವಕಪ್ ಪಂದ್ಯಗಳ ಟಿಕೆಟ್ಗಳಿಗಾಗಿ ಅರ್ಜಿ ಸಲ್ಲಿಸಲು ನವೆಂಬರ್ 21ರವರೆಗೂ ಅವಕಾಶವಿದೆ. 14 ತಂಡಗಳು ಭಾಗವಹಿಸುವ ಟೂರ್ನಿಯ ಪಂದ್ಯಗಳ ಟಿಕೆಟ್ಗಾಗಿ ಇದುವರೆಗೆ 12 ಕೋಟಿಗೂ ಅಧಿಕ ಅರ್ಜಿಗಳು ಬಂದಿವೆ ಎಂದು ಐಸಿಸಿ ತಿಳಿಸಿದೆ.