

ಕ್ರೖೆಸ್ಟ್ಚರ್ಚ್: ಯುವ ಆರಂಭಿಕ ಆಟಗಾರ ಪೃಥ್ವಿ ಷಾ ಗುರುವಾರ ತಂಡದ ಅಭ್ಯಾಸ ಅವಧಿಯ ವೇಳೆ ಎಡಗಾಲಿನ ಗಾಯಕ್ಕೆ ತುತ್ತಾಗಿದ್ದಾರೆ. ಅಭ್ಯಾಸದ ವೇಳೆ ಅವರ ಎಡಗಾಲು ತಾನಾಗಿಯೇ ಊದಿಕೊಂಡಿದ್ದು ಗಮನಕ್ಕೆ ಬಂದಿದೆ. ಇದರಿಂದಾಗಿ 2ನೇ ಟೆಸ್ಟ್ಗೆ ಟೀಮ್ ಮ್ಯಾನೇಜ್ವೆುಂಟ್ನ ಆತಂಕ ಇನ್ನಷ್ಟು ಹೆಚ್ಚಾಗಿದೆ.
ಗುರುವಾರವೇ ಪೃಥ್ವಿ ಷಾರ ರಕ್ತ ಪರೀಕ್ಷೆ ನಡೆಸಲಾಗಿದ್ದು, ಕಾಲು ಊದಿಕೊಳ್ಳಲು ಕಾರಣವೇನು ಎನ್ನುವುದನ್ನು ತಿಳಿಯಲು ಪ್ರಯತ್ನಿಸಲಾಗಿದೆ. ವೈದ್ಯಕೀಯ ವರದಿಯ ಆಧಾರದ ಮೇಲೆ ಶುಕ್ರವಾರ ತಂಡದ ಅಭ್ಯಾಸ ಅವಧಿ ಹಾಗೂ ಶನಿವಾರ ಕ್ರೖೆಸ್ಟ್ ಚರ್ಚ್ನಲ್ಲಿ ಆರಂಭವಾಗಲಿರುವ 2ನೇ ಟೆಸ್ಟ್ಗೆ ಲಭ್ಯರಿದ್ದಾರೆಯೇ ಎನ್ನುವುದನ್ನು ತೀರ್ವನಿಸಲಾಗುತ್ತದೆ. ಬ್ಯಾಟಿಂಗ್ ಮಾಡುವ ವೇಳೆ ಅವರಿಗೆ ಸಮಸ್ಯೆ ಎದುರಾಗುವುದು ಕಂಡುಬಂದಲ್ಲಿ, ಆಡುವ ಬಳಗಕ್ಕೆ ಆಯ್ಕೆಯಾಗುವುದು ಅನುಮಾನವಾಗಿದೆ.
ಶುಭಮಾನ್ ಗಿಲ್ ಗುರುವಾರ ಉತ್ತಮ ಅಭ್ಯಾಸದಲ್ಲಿ ಭಾಗಿಯಾಗಿದ್ದು, ಪೃಥ್ವಿ ಷಾ ಫಿಟ್ ಆಗದೇ ಇದ್ದಲ್ಲಿ ಮಯಾಂಕ್ ಅಗರ್ವಾಲ್ರೊಂದಿಗೆ ಇನಿಂಗ್ಸ್ ಆರಂಭಿಸಲಿದ್ದಾರೆ. ಅಭ್ಯಾಸದ ಸಮಯದಲ್ಲೂ ಮುಖ್ಯ ಕೋಚ್ ರವಿಶಾಸ್ತ್ರಿ ಶುಭಮಾನ್ ಗಿಲ್ರ ಆಟದತ್ತ ಹೆಚ್ಚಿನ ಗಮನ ನೀಡಿದ್ದರು. ಒಂದು ಹಂತದಲ್ಲಿ ಗಿಲ್ರ
ಬಳಿ ತೆರಳಿದ ರವಿಶಾಸ್ತ್ರಿ ಅವರ ಫುಟ್ವರ್ಕ್ ಕುರಿತಾಗಿ ಕೆಲ ತಾಂತ್ರಿಕ ಸಲಹೆಗಳನ್ನು ನೀಡಿದರು. ಅಪ್ಪರ್ ಕಟ್ ಮಾಡುವ ಹಂತದಲ್ಲಿ ಗಿಲ್ರ ಫುಟ್ವರ್ಕ್ ಕಳವಳಕಾರಿಯಾಗಿರುವುದು ಕೋಚ್ ಗಮನಕ್ಕೆ ಬಂದಿತ್ತು.
ಟೀಮ್ ಮ್ಯಾನೇಜ್ವೆುಂಟ್ ಪೃಥ್ವಿ ಷಾರ ಕಾಲು ಊದಿಕೊಂಡಿರುವುದು ಗಂಭೀರ ಸಮಸ್ಯೆ ಅಲ್ಲ ಎನ್ನುವ ವಿಶ್ವಾಸದಲ್ಲಿದೆ. ಅದಲ್ಲದೆ, ಕಡ್ಡಾಯವಾಗಿದ್ದ ವಾಮರ್್ಅಪ್ ವೇಳೆಯಲ್ಲೂ ಪೃಥ್ವಿ ಹಾಜರಿರಲಿಲ್ಲ. ಈ ವೇಳೆ ಆಟಗಾರರು ರಗ್ಬಿ ಆಡುವ ಮೂಲಕ ಕಾಲ ಕಳೆದರು. -ಪಿಟಿಐ