

ಹಾಂಗ್‌ರೆೌ: ನಾಯಕ ಸುನೀಲ್ ಛೇಟ್ರಿ ಸಿಡಿಸಿದ ಏಕೈಕ ಗೋಲಿನಿಂದ ಏಷ್ಯನ್ ಗೇಮ್ಸ್‌ನ ಫುಟ್‌ಬಾಲ್ ಸ್ಪರ್ಧೆಯಲ್ಲಿ ಮಯಾನ್ಮಾರ್ ಎದುರು 1-1 ಡ್ರಾ ಸಾಧಿಸುವಲ್ಲಿ ಸಲವಾದ ಭಾರತ ತಂಡ ಅಂತಿಮ 16ರ ಘಟ್ಟಕ್ಕೆ ಅರ್ಹತೆ ಸಂಪಾದಿಸಿದೆ. ಸುನೀಲ್ ಛೇಟ್ರಿ ಪಡೆ ಗುಂಪಿನ 2ನೇ ತಂಡವಾಗಿ ನಾಕೌಟ್ ಹಂತಕ್ಕೇರಿದ್ದು, ಸೌದಿ ಅರೇಬಿಯಾ ತಂಡವನ್ನು ಎದುರಿಸಲಿದೆ. ಭಾರತ ುಟ್‌ಬಾಲ್ ತಂಡ 13 ವರ್ಷಗಳ ಬಳಿಕ ಏಷ್ಯನ್ ಗೇಮ್ಸ್‌ನಲ್ಲಿ ನಾಕೌಟ್ ಹಂತಕ್ಕೆ ಅರ್ಹತೆ ಪಡೆಯಿತು.
ಭಾನುವಾರ ನಡೆದ ಗುಂಪಿನ ತನ್ನ 3ನೇ ಹಾಗೂ ಕೊನೇ ಲೀಗ್ ಪಂದ್ಯದಲ್ಲಿ ಆರಂಭಿಕ ಮುನ್ನಡೆಯನ್ನು ಕಾಯ್ದುಕೊಳ್ಳುವಲ್ಲಿ ವಿಲವಾದ ಭಾರತ ಡ್ರಾಗೆ ತೃಪ್ತಿಪಟ್ಟಿತು. 23ನೇ ನಿಮಿಷದಲ್ಲಿ ದೊರೆತ ಪೆನಾಲ್ಟಿ ಅವಕಾಶದಲ್ಲಿ ಸುನೀಲ್ ಛೇಟ್ರಿ (23ನೇ ನಿಮಿಷ) ಭಾರತ ಪರ ಗೋಲು ದಾಖಲಿಸಿದರು. ಮಯನ್ಮಾರ್ ಪರ ಕ್ಯಾವ್ ಹ್ಟ್ವೆ (74) ಗೋಲು ಬಾರಿಸಿ ಪಂದ್ಯದಲ್ಲಿ ಸಮಬಲ ತಂದರು.
ಎ ಗುಂಪಿನಲ್ಲಿ ಆತಿಥೇಯ ಚೀನಾ, ಮಯಾನ್ಮಾರ್, ಬಾಂಗ್ಲಾದೇಶ ಜತೆಗೆ ಸ್ಥಾನ ಪಡೆದಿದ್ದ ಭಾರತ ಗುಂಪಿನ 2ನೇ ತಂಡವಾಗಿ 16ರ ಘಟ್ಟಕ್ಕೆ ಲಗ್ಗೆಯಿಟ್ಟಿತು. ಆಡಿರುವ 3 ಪಂದ್ಯಗಳಲ್ಲಿ ಚೀನಾ ಎದುರು 5-1 ಸೋಲು, ಬಾಂಗ್ಲಾದೇಶ ಎದುರು 0-1 ಗೆಲುವು, ಮಯನ್ಮಾರ್ ಎದುರು ಡ್ರಾ ಸಾಧಿಸಿದ ಭಾರತ 4 ಅಂಕ ಕಲೆಹಾಕಿ ಅಂಕಪಟ್ಟಿಯಲ್ಲಿ 2ನೇ ಸ್ಥಾನ ಗಳಿಸಿತು. ಚೀನಾ 7 ಅಂಕದೊಂದಿಗೆ ಅಗ್ರಸ್ಥಾನದಲ್ಲಿದೆ. ಮಯಾನ್ಮಾರ್ ಹಾಗೂ ಭಾರತ ತಲಾ 4 ಅಂಕಗಳಿಸಿದ್ದರೂ, ಗೋಲಿನ ವ್ಯತ್ಯಾಸದಲ್ಲಿ ಮಯಾನ್ಮಾರ್ (2) ತಂಡವನ್ನು ಹಿಂದಿಕ್ಕಿದ ಭಾರತ (3) ಮುಂದಿನ ಸುತ್ತಿಗೆ ಅರ್ಹತೆ ಪಡೆಯಿತು.
ಮಹಿಳಾ ತಂಡದ ಸವಾಲು ಅಂತ್ಯ: ಭಾರತ ಮಹಿಳಾ ುಟ್‌ಬಾಲ್ ತಂಡ ಏಷ್ಯನ್ ಗೇಮ್ಸ್‌ನ ನಾಕೌಟ್ ಹಂತಕ್ಕೇರುವಲ್ಲಿ ವಿಲವಾಗಿದೆ. ಭಾನುವಾರ ನಡೆದ ಪಂದ್ಯದಲ್ಲಿ ಥಾಯ್ಲೆಂಡ್ ಎದುರು 0-1ರಿಂದ ಭಾರತ ಸೋಲು ಅನುಭವಿಸಿತು. ಮೊದಲ ಪಂದ್ಯದಲ್ಲಿ ಚೀನಾ ತೈಪೆ ಎದುರು ಮುಗ್ಗರಿಸಿತ್ತು. ಪಂದ್ಯದ ಮೊದಲಾರ್ಧದಲ್ಲಿ ಉತ್ತಮ ನಿರ್ವಹಣೆ ತೋರಿದ ಭಾರತ ತಂಡ ಬಿ ಗುಂಪಿನಿಂದ ಪ್ರಿ ಕ್ವಾರ್ಟರ್‌ೈನಲ್ ಆಸೆ ಜೀವಂತವಿರಿಸಲು ಗೆಲ್ಲಲೇಬೇಕಾದ ಒತ್ತಡದಲ್ಲಿ ಕಣಕ್ಕಿಳಿಯಿತು. ಮೊದಲಾರ್ಧದ ಗೋಲುರಹಿತವಾಗಿ ಉಳಿಯಿತು. ದ್ವಿತೀರ್ಯಾಧದಲ್ಲಿ ಥಾಂಗ್ರಾಂಗ್ ಪರಿಚತ್ (52ನೇ ನಿಮಿಷ) ಥಾಯ್ಲೆಂಡ್ ಪರ ಗೆಲುವಿನ ಗೋಲು ಸಿಡಿಸಿದರು. ಇದರೊಂದಿಗೆ ಥಾಯ್ಲೆಂಡ್ ಗುಂಪಿನ ಅಗ್ರಸ್ಥಾನಿಯಾಗಿ 16ರ ಘಟಕ್ಕೆ ಪ್ರವೇಶಿಸಿತು.