

ಧರ್ಮಶಾಲಾ: ಇಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಐದನೇ ಹಾಗೂ ಕೊನೆಯ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ ಮೊದಲ ದಿನದಾಟದದಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 218 ರನ್ಗಳಿಗೆ ಮೊದಲ ಇನ್ನಿಂಗ್ಸ್ ಮುಗಿಸಿದೆ.
ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ಉತ್ತಮ ಆರಂಭ ಪಡೆಯಿತು. ಆರಂಭಿಕ ಆಟಗಾರ ಝಾಕ್ ಕ್ರಾಲಿ (79 ರನ್) ಬೆನ್ ಡಕೆಟ್ (27) ರನ್ಗಳಿಸಿದರು. 27 ರನ್ಗಳಿಸಿದ ಬೆನ್ ಡಕೆಟ್ ಕುಲ್ದೀಪ್ಗೆ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಒಲೀ ಪೋಪ್ (11) ಕೂಡ ಔಟಾದರು. ಇನ್ನು ಝಾಕ್ ಕ್ರಾಲಿ ಬಿರುಸಿನ 79 ರನ್ಗಳಿಸಿದರೂ ಹೆಚ್ಚು ಹೊತ್ತು ಕ್ರೀಸ್ನಲ್ಲಿರಲಿಲ್ಲ ಕುಲ್ದೀಪ್ಗೆ ಬೌಲಿಂಗ್ಗೆ ವಿಕೆಟ್ ಒಪ್ಪಿಸಿದರು.
ಈ ಹಂತದಲ್ಲಿ ಕಣಕ್ಕಿಳಿದ ಜೋ ರೂಟ್ ಹಾಗೂ ಜಾನಿ ಬೈರ್ಸ್ಟೋವ್ ಉತ್ತಮ ಜೊತೆಯಾಟ ಪ್ರದರ್ಶಿಸಿದರು. ಆದರೆ 29 ರನ್ಗಳಿಸಿದ ಬೈರ್ಸ್ಟೋವ್ ಕುಲ್ದೀಪ್ ಬಿರುಸಿನ ಬೌಲಿಂಗ್ಗೆ ಔಟ್ ಆದರು. ರೂಟ್ (26), ಬೆನ್ ಸ್ಟೋಕ್ಸ್ (0) ಕೂಡ ವಿಕೆಟ್ ಕೈಚೆಲ್ಲಿದರು. ಈ ವೇಳೆ ಕೇವಲ 175 ರನ್ಗಳಿಗೆ 6 ವಿಕೆಟ್ ಕಳೆದುಕೊಂಡು ಇಂಗ್ಲೆಂಡ್ ತಂಡ ಸಂಕಷ್ಟಕ್ಕೆ ಸಿಲುಕಿತ್ತು.
ಇನ್ನುಳಿದಂತೆ ಬೆನ್ ಫೋಕ್ಸ್ 24, ಟಾಮ್ ಹಾರ್ಟ್ಲಿ 6, ಹಾಗೂ ಶೋಯಬ್ ಬಷೀರ್ ಅಜೇಯ 11 ರನ್ ಗಳಿಸಿದರು. ಮಾರ್ಕ್ ವುಡ್ ಹಾಗೂ ಜೇಮ್ಸ್ ಆ್ಯಂಡರ್ಸನ್ ಸಹ ಶೂನ್ಯಕ್ಕೆ ಔಟ್ ಆದರು.
ಕುಲದೀಪ್ ಯಾದವ್ 72 ರನ್ ನೀಡಿ ಐದು ವಿಕೆಟ್ ಗಳಿಸಿ ಮಿಂಚಿದರು. ಅಲ್ಲದೆ ಟೆಸ್ಟ್ ಕ್ರಿಕೆಟ್‌ನಲ್ಲಿ 50 ವಿಕೆಟ್ ಪೂರ್ಣಗೊಳಿಸಿದರು. ಮತ್ತೊಂದೆಡೆ 100ನೇ ಟೆಸ್ಟ್ ಪಂದ್ಯ ಆಡುತ್ತಿರುವ ಅಶ್ವಿನ್ ನಾಲ್ಕು ವಿಕೆಟ್ ಗಳಿಸಿದರು.